ಮುಂಬೈ, ಮೇ 10 (DaijiworldNews/MS): ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಇಂಜುರಿಗೊಂಡು ಐಪಿಎಲ್ನಿಂದ ಹೊರಬಿದ್ದಿದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಫೀಲ್ಡಿಂಗ್ ಮಾಡುವಾಗ ಬಲತೊಡೆಗೆ ಗಾಯವಾದ ಕಾರಣ ರಾಹುಲ್ ಐಪಿಎಲ್ ಹಾಗೂ ಡಬ್ಲ್ಯುಟಿಸಿ ಫೈನಲ್ ಪಂದ್ಯದಿಂದಹೊರಬಿದ್ದಿದ್ದರು. ನಿನ್ನೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಮುಂಬರುವ ವಾರಗಳಲ್ಲಿ, ನನ್ನ ಸಂಪೂರ್ಣ ಗಮನವು ಚೇತರಿಕೆಯ ಮೇಲೆ ಇರುತ್ತದೆ ಎಂದು ಹೇಳಿದ್ದಾರೆ.
ಅವರ ಮಾವ ಸುನಿಲ್ ಶೆಟ್ಟಿ ಮತ್ತು ಪತ್ನಿ ಅಥಿಯಾ ಅವರು ರಾಹುಲ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಕ್ರಿಕೆಟಿಗರು ಕೂಡ ಶೀಘ್ರ ಗುಣಮುಖರಾಗಲಿ ಎಂದು ಟ್ವೀಟ್ ಮಾಡುತ್ತಿದ್ದಾರೆ.