ದುಬೈ, ಮೇ8(Daijiworld News/KH):ಭಾನುವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಪರಿಣಾಮ ಪಾಕಿಸ್ತಾನ ತಂಡ ಅಗ್ರಸ್ಥಾನದಿಂದ ಕೆಳಗಿಳಿದಿದೆ. ಐಸಿಸಿ ಶ್ರೇಯಾಂಕ ಅಗ್ರಸ್ಥಾನಕ್ಕೆ ಏರಿ ಇತಿಹಾಸ ನಿರ್ಮಿಸಿದ್ದ ಪಾಕಿಸ್ತಾನ ತಂಡ ದ ಸಂತೋಷ ಕೇವಲ 48 ಗಂಟೆಗಳು ಮಾತ್ರ ಉಳಿದಿತ್ತು.
ನಾಲ್ಕನೇ ಏಕದಿನ ಪಂದ್ಯ ಮೇ 5 ಶುಕ್ರವಾರ ನಡೆದಿದ್ದು, ಪಾಕ್ ತಂಡ ಕಿವೀಸ್ ವಿರುದ್ದ 102 ರನ್ ಗಳ ಮೂಲಕ ಗೆಲುವು ದಾಖಲಿಸಿದೆ. ಹೀಗಾಗಿ ಭಾರಿ ಪ್ರಗತಿ ಸಾಧಿಸುವ ಮೂಲಕ ಶ್ರೇಯಾಂಕದಲ್ಲಿ 5 ನೇ ಸ್ಥಾನ ದಿಂದ ಒಮ್ಮೆಲೇ 4 ನೇ ಸ್ಥಾನ ಏರಿಕ್ಕೆ ಕಂಡು ನಂ. 1 ಸ್ಥಾನಕ್ಕೇರಿತ್ತು. ಇದೀಗ ಅಂತಿಮ ಪಂದ್ಯದಲ್ಲಿ ಸೋಲು ಕಂಡ ಕಾರಣ ಅಗ್ರಸ್ಥಾನ ದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಪಾಕಿಸ್ತಾನ ಸದ್ಯ 122 ರೆಟಿಂಗ್ ಅಂಕ ಹೊಂದಿದೆ.
ಪಾಕಿಸ್ತಾನ ತಂಡದ ಕುಸಿತಾದಿಂದ ಆಸ್ಟ್ರೇಲಿಯಾ ಮತ್ತು ಟೀಮ್ ಇಂಡಿಯಾ ಕ್ರಮವಾಗಿ ಮತ್ತೆ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಆಸೀಸ್ ತಂಡ ಕಡಿಮೆ ಪಂದ್ಯ ಆಡಿದ ಸಾಲುವಾಗಿ ಅಗ್ರಸ್ಥಾನ ಪಡೆದಿದೆ.
ಅಂತಿಮ ಪಂದ್ಯ ಕರಾಚಿಯಲ್ಲಿ ನಡೆದಿದ್ದು,ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 49.3 ಓವರ್ ರಲ್ಲಿ ವಿಕೆಟ್ ಕಳೆದುಕೊಂಡು 299 ರನ್ ಗಳಿಸಿತು. ಪಾಕಿಸ್ತಾನ 46.1ಓವರ್ ನಲ್ಲಿ 252ರನ್ ಗಳಿಗೆ ಸರ್ವಪತನ ಕಂಡು 47 ರನ್ ಗಳ ಮೂಲಕ ಸೋಲಿಗೆ ತುತ್ತಾಯಿತು.