ಸೌದಿ ಅರೇಬಿಯಾ, ಏ 01 (DaijiworldNews/HR): ಸೌದಿ ಅರೇಬಿಯಾದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಎಲೈಟ್ ಕಪ್ - ಸೌದಿ ಅರೇಬಿಯಾ 2023 ಕ್ರೀಡಾಕೂಟ ಅತೀ ವಿಜೃಂಭಣೆಯಿಂದ ನಡೆಯಲಿದೆ.
ಎಲೈಟ್ ಸಪೋರ್ಟ್ ಕಾಂಟ್ರಾಕ್ಟಿಂಗ್ ಕಂಪೆನಿ ಸೌದಿ ಅರೇಬಿಯಾದ ಸಿಇಒ ಮಂಗಳೂರಿನ ಗಂಜಿಮಠ ನಿವಾಸಿ, ಇಜಾಸ್ ಗಂಜಿಮಠ ಇವರು ಕಂಪೆನಿಯ ಪ್ರಮೋಷನ್ ಗಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ.
ಮೇ 10 ರಿಂದ 12ರವರೆಗೆ ಸೌದಿ ಅರೇಬಿಯಾದ ಅಲ್ ಜುಬೈಲ್ ನ ಎಕ್ಸ್ ಪರ್ಟೈಸ್ ಕ್ರೀಡಾಂಗಣದಲ್ಲಿ ಈ ವಿಜ್ರಂಭಣೆಯ ಕ್ರೀಡಾಕೂಟ ನಡೆಯಲಿದ್ದು, ಈ ಪಂದ್ಯಾಕೂಟದ ಟ್ರೋಫಿ ಅನಾವರಣ, ಜರ್ಸಿ ಅನಾವರಣ ಹಾಗೂ ಫೈನಲ್ ಡ್ರಾ ಕಾರ್ಯಕ್ರಮ ಇತ್ತೀಚೆಗೆ ಏ. 29ರಂದು ಅಲ್ ಜುಬೈಲ್ ನ ಕುಕ್ಝೋನ್ ರೆಸ್ಟೋರೆಂಟ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಎಲೈಟ್ ಕಂಫೆನಿಯ ಸಿಇಒ ಮೊಹಮ್ಮದ್ ಇಜಾಜ್ ಗಂಜಿಮಠ, ಕಂಪೆನಿಯ ಪೌಂಡರ್ ಇಬ್ರಾಹಿಂ ಅಲ್ ರೊವೈಶಿದ್, ಎಕ್ಸ್ ಪರ್ಟೈಸ್ ಕಂಪೆನಿಯ ಅಬ್ದುಲ್ ಅಝೀಜ್, ಎಕ್ಸಲ್ಶನ್ ಕಂಪೆನಿಯ ರಾಝಿನ್, ಕಂಪೆನಿಯ ಆರ್ಗನೈಸಿಂಗ್ ಕಮಿಟಿ ಎಲ್ಲಾ ಸದಸ್ಯರು, ಎಲೈಟ್ ಕಂಪೆನಿಯ ಉದ್ಯೋಗಿಗಳು ಹಾಗೂ ಇಡೀ ಕ್ರಿಕೆಟ್ ಕ್ರೀಡಾಕೂಟದ ಜವಾಬ್ದಾರಿಯನ್ನು ಹೊತ್ತ ಝಮೀರ್ ಮತ್ತು ಸಫ್ವಾನ್, ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಹನ್ನೆರಡು ತಂಡದ ನಾಯಕರು ಉಪಸ್ಥಿತರಿದ್ದು, ಜರ್ಸಿಯನ್ನು ಧರಿಸಿ ಬಿಡುಗೊಡೆಗೊಳಿಸಿದರು.
ಇನ್ನು ವಿಜೃಂಭಣೆಯ ಈ ಕ್ರೀಡಾಕೂಟ ನಡೆಯಲು ಕ್ರೀಡಾಂಗಣವನ್ನು ಒದಗಿಸಿ ಕೊಟ್ಟ ಎಕ್ಸಫರ್ಟೈಸ್ ಕಂಪೆನಿಯ ಜನಾಬ್ ಸಯ್ಯದ್ ಶೇಕಬ್ಬ, ಜನಾಬ್ ಮೊಹಮ್ಮದ್ ಅಶ್ಫಾಕ್, ಜ. ಮೊಹಮ್ಮದ್ ಆಸೀಫ್ ಹಾಗೂ ಜ. ಮೊಹಮ್ಮದ್ ಅಶ್ರಪ್ ರವರಿಗೆ ಈ ಸಂದರ್ಭದಲ್ಲಿ ವಿಶೇಷವಾಗಿ ಧನ್ಯವಾದವನ್ನು ಕಂಪೆನಿ ಸಿಇಒ ಮೊಹಮ್ಮದ್ ಇಜಾಜ್ ಗಂಜಿಮಠ ಸಮರ್ಪಿಸಿದರು.
ಕ್ರೀಡಾಕೂಟದ ಸಮಾರೋಪ ಸಮಾರಂಭವು ಮೇ. 12ರಂದು ಬಹಳ ಅಭೂತಪೂರ್ವವಾಗಿ ಇದೇ ಕ್ರೀಡಾಂಗಣದಲ್ಲಿ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ಹಾಗೂ ಕಲಾವಿದರಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಮೊಹಮ್ಮದ್ ಇಕ್ಬಾಲ್ ಕಾಟಿಪಳ್ಳ ಹಾಗೂ ಇಂಟರ್ ನ್ಯಾಷನಲ್ ಹೋಸ್ಟ್ ಯಾಂಡ್ ದೋಸ್ತ್ ಸಾಹಿಲ್ ಝಹೀರ್ ಇವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವು ಕೇವಲ ಕ್ರಿಕೆಟ್ ಗೆ ಮಾತ್ರ ಸೀಮಿತವಾಗಿರದೆ, ಫುಡ್ ಪೆಸ್ಟ್, ಕಿಡ್ಸ್ ಗೇಮ್ಸ್, ಮ್ಯೂಸಿಕ್, ಫ್ಯಾಮಿಲಿ ಈವೆಂಟ್ಸ್, ಲಕ್ಕಿ ಡ್ರಾ, ಹಾಗೂ ಇನ್ನಿತರ ಸ್ಪಾಟ್ ಗೇಮ್ ಗಳನ್ನು ಒಳಗೊಂಡಿರುತ್ತದೆ. ಅಲ್ಲದೆ, ಕ್ರೀಡಾಕೂಟದ ಪ್ರಥಮ ಬಹುಮಾನವು ಎಲೈಟ್ ಕಪ್ ಮತ್ತು ಏಳು ಲಕ್ಷಕ್ಕೂ ಅಧಿಕ ಮೊತ್ತದ ನಗದು ಬಹುಮಾನವನ್ನು ಒಳಗೊಂಡಿದ್ದು, ದ್ವಿತೀಯ ಬಹುಮಾನವು ಎಲೈಟ್ ಕಪ್ ಹಾಗೂ ನಾಲ್ಕು ಲಕ್ಷಕ್ಕೂ ಅಧಿಕ ರೂಪಾಯಿ ಮೊತ್ತದ ಬಹುಮಾನವನ್ನು ಒಳಗೊಂಡಿದೆ.