ಹೈದರಾಬಾದ್, ಏ 25 (DaijiworldNews/HR): ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 7 ರನ್ಗಳಿಂದ ಮಣಿಸಿದ ಡೆಲ್ಲಿ ತಂಡ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಆದರೆ ಗೆಲುವಿನ ಸಂಭ್ರಮದಲ್ಲಿರುವ ತಂಡದ ನಾಯಕ ಡೇವಿಡ್ ವಾರ್ನರ್ಗೆ ಬಿಸಿಸಿಐಯು 12 ಲಕ್ಷ ರೂ. ದಂಡ ವಿಧಿಸಿದೆ.
ವಾಸ್ತವವಾಗಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಿಗಧಿತ ಸಮಯಕ್ಕೆ ಓವರ್ ಮುಗಿಸದಿದ್ದಕ್ಕಾಗಿ ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ನಿಧಾನಗತಿಯ ಓವರ್ರೇಟ್ ಅನ್ನು ಕಾಯ್ದುಕೊಂಡಿದ್ದರಿಂದ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಂಡಳಿ ಮಾಹಿತಿ ನೀಡಿದೆ.