ಮುಂಬೈ, ಏ 23 (DaijiworldNews/HR): ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ಬೌಲರ್ ಅರ್ಶದೀಪ್ ಸಿಂಗ್ ಅವರ ಆ ಎರಡು ಎಸೆತಗಳು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.
ಮುಂಬೈ ಗೆಲುವಿಗೆ ಒಂದು ಓವರ್ ನಲ್ಲಿ 16 ರನ್ ಬೇಕಿದ್ದಾಗ ಓವರ್ ಎಸೆಯಲು ಬಂದ ಅರ್ಶದೀಪ್ ಬೆಂಕಿ ಚೆಂಡೆಸೆದಿದ್ದು, ಅದರಲ್ಲೂ ಮೂರನೇ ಎಸೆತದಲ್ಲಿ ತಿಲಕ್ ವರ್ಮಾ ಬೌಲ್ಡ್ ಆಗಿದ್ದು, ಮಧ್ಯದ ಸ್ಟಂಪ್ ಎರಡು ತುಂಡಾಯಿತು.
ಇನ್ನು ಕೊನೆಯ ಓವರ್ನಲ್ಲಿ ಸ್ಟಂಪ್ ಗಳನ್ನು ಎರಡು ಬಾರಿ ಬದಲಾಯಿಸಬೇಕಾಗಿತ್ತು, ಪಿಚ್ನ ಎರಡೂ ತುದಿಗಳಲ್ಲಿರುವ ಮೂರು ಸ್ಟಂಪ್ಗಳು ಅಥವಾ ಸ್ಟಂಪ್ ಗಳ ಸೆಟ್ಗಳ ಬೆಲೆ ಸರಿಸುಮಾರು 25 ಲಕ್ಷ ರೂ. ಇದಲ್ಲದೆ, ಚೆಂಡನ್ನು ಅಥವಾ ಆಟಗಾರನೊಂದಿಗೆ ಸಂಪರ್ಕಕ್ಕೆ ಬಂದ ತಕ್ಷಣ ಫ್ಲ್ಯಾಷ್ ಮಾಡುವ ಜಿಂಗ್ ಬೇಲ್ಸ್ ಬೆಲೆ ಸುಮಾರು 50 ಸಾವಿರ ರೂ ಇರುತ್ತದೆ.