ಕೋಲ್ಕತಾ, ಏ 14 (DaijiworldNews/SM): ಸತತ ವೈಫಲ್ಯಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದ ಇಂಗ್ಲೆಂಡ್ನ ಯುವ ಬ್ಯಾಟರ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಕೋಲ್ಕತ್ತಾ ತಂಡದ ಎದುರಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಟೀಕಾಕಾರವಾಗಿ ಪ್ರತ್ಯುತ್ತರ ನೀಡಿದ್ದಾರೆ.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್ಗಳನ್ನು ಬಡಿದು ಬೆಂಡೆತ್ತಿದ ಬಲಗೈ ಬ್ಯಾಟರ್ ಹ್ಯಾರಿ ಬ್ರೂಕ್, ಕೇವಲ 55 ಎಸೆತಗಳಲ್ಲಿ ಶತಕ ಬಾರಿಸಿ ಅಜೇಯರಾಗಿ ಉಳಿದರು. ಇದು ಐಪಿಎಲ್ 2023 ಟೂರ್ನಿಯ ಮೊತ್ತ ಮೊದಲ ಶತಕವಾಗಿದೆ. ಅವರ ಇನಿಂಗ್ಸ್ನಲ್ಲಿ 12 ಫೋರ್ ಮತ್ತು 3 ಶತಕಗಳು ಸಿಡಿದವು. ಹ್ಯಾರಿ ಬ್ರೂಕ್ ಅಮೋಘ ಶತಕದ ನೆರವಿನಿಂದ ತಂಡ 4 ವಿಕೆಟ್ ನಷ್ಟಕ್ಕೆ 228 ರನ್ ಕಲೆ ಹಾಕಿ ಭರ್ಜರಿ ಮೊತ್ತವನ್ನು ಕೆಕೆಆರ್ ಮುಂದಿಟ್ಟಿದೆ.
ಮಯಾಂಕ್ ಅಗರ್ವಾಲ್ 9, ರಾಹುಲ್ ತ್ರಿಪಾಠಿ 9, ನಾಯಕ ಐಡೆನ್ ಮಾರ್ಕ್ರಾಮ್ 50 ರನ್ ಗಳಿಸಿ ಔಟಾದರು. ಅಭಿಷೇಕ್ ಶರ್ಮಾ 32 ರನ್ ಕೊಡುಗೆ ಸಲ್ಲಿಸಿದರು. ಹೆನ್ರಿಚ್ ಕ್ಲಾಸೆನ್ ಔಟಾಗದೆ 16 ರನ್ ಗಳಿಸಿದರು.