ಆಸ್ಟ್ರೇಲಿಯಾ, ಏ 14 (DaijiworldNews/HR): ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೆಸ್ ಜೊನಾಸೆನ್ ಅವರು ತಮ್ಮ ಆತ್ಮೀಯ ಸ್ನೇಹಿತೆ ಸಾರಾ ಗೂಡರ್ಹ್ಯಾಮ್ ಅವರನ್ನು ವಿವಾಹವಾಗಿದ್ದಾರೆ.
ಆಸ್ಟ್ರೇಲಿಯಾದ ಆಲ್ರೌಂಡರ್ ಜೆಸ್ ಜೊನಾಸೆನ್ ಏಪ್ರಿಲ್ 14 ರಂದು ಸಾರಾ ಗುಡೆರ್ಹ್ಯಾಮ್ ಅವರೊಂದಿಗಿನ ವಿವಾಹವಾಗಿರುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಜೋಡಿ 2018 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, 2020 ರಲ್ಲಿ ಮದುವೆಯಾಗಲು ಇಚ್ಚಿಸಿದ್ದರು. ಆದರೆ ಕೋರೊನಾದಿಂದಾಗಿ ಮುಂದೂಡಿ ಇದೀಗ ಮದುವೆಯಾಗಿದ್ದಾರೆ.