ಚೆನ್ನೈ,ಮಾ23(AZM):2019ರ ಐಪಿಎಲ್ ಟೂರ್ನಿ ಇಂದು ಆರಂಭಗೊಂಡಿದ್ದು, ಪಂದ್ಯ ಆರಂಭಕ್ಕೂ ಮುನ್ನಾ, ಸಿಎಸ್ ಕೆ ಫ್ರಾಂಚೈಸಿ ವತಿಯಿಂದ ಪುಲ್ವಾಮ ಹುತಾತ್ಮ ಯೋಧರ ಕುಟುಂಬಕ್ಕೆ 2 ಕೋಟಿ ರೂ.ಹಣವನ್ನು ನೆರವು ನೀಡಿದೆ.
ಸಿ ಎಸ್ ಕೆ ನಾಯಕ ಹಾಗೂ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕೊಲೊನೆಲ್ ಎಂ.ಎಸ್.ಧೋನಿಯವರು 2 ಕೋಟಿ ರೂಪಾಯಿಯ ಚೆಕ್ ವಿತರಿಸಿದರು.ಕಳೆದ ವಾರ ಸಿಎಸ್ ಕೆ ಪಂದ್ಯದ ಆದಾಯವನ್ನು ಪುಲ್ವಾಮಾ ಹುತಾತ್ಮಯ ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿತ್ತು. ಆದರಂತೆ ಇಂದು 2 ಕೋಟಿ ರೂಪಾಯಿ ಹಣವನ್ನು ನೀಡಿದೆ.ಬಿಸಿಸಿಐ ಈಗಾಗಲೇ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದುಗೊಳಿಸಿ 20 ಕೋಟಿ ರೂಪಾಯಿ ನೆರವು ನೀಡಿದೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 25 ಲಕ್ಷ ರೂಪಾಯಿ ನೆರವು ನೀಡಿದೆ.
ಫೆ.14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಪಾಕಿಸ್ತಾನ ಉಗ್ರರ ದಾಳಿಯಲ್ಲಿ ಭಾರತೀಯ 40ಕ್ಕೂ ಹೆಚ್ಚು ಸಿಆರ್ ಪಿ ಎಫ್ ಯೋಧರು ಹುತಾತ್ಮರಾಗಿದ್ದರು.