ಸೌತಾಂಪ್ಟನ್, ಏ 9 (DaijiworldNews/MS) : ಮ್ಯಾಂಚೆಸ್ಟರ್ ಸಿಟಿ ತಂಡದ ಪುಟ್ಬಾಲ್ ಆಟಗಾರ ಎರ್ಲಿಂಗ್ ಹಾಲೆಂಡ್ ಅಧ್ಬುತ ಗೋಲು ಹೊಡೆದ ನಂತರ ಪದ್ಮಾಸನ ಅಥವಾ ಧ್ಯಾನದ ಆಸನ ಮೂಲಕ ಸೆಲೆಬ್ರೇಶನ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸೌತಾಂಪ್ಟನ್ನಲ್ಲಿ ಶನಿವಾರ ನಡೆದ ಇಂಗ್ಲಿಷ್ ಪ್ರೀಮಿಯರ್ ಲೀಗಿನಲ್ಲಿ ಚೆಲ್ಸಿ ವಿರುದ್ಧ ಎರಡು ಗೋಲು ಬಾರಿಸಿದರು. ಎರ್ಲಿಂಗ್ ಇದೀಗ ಪ್ರೀಮಿಯರ್ ಲೀಗಿನ ಗೋಲು ಬೇಟೆಗಾರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಲೆಂಡ್ ಹೆಡರ್ ಮತ್ತು ಗಮನಾರ್ಹ ಬೈಸಿಕಲ್ ಕಿಕ್ನಲ್ಲಿ ಸ್ಕೋರ್ ಮಾಡಿದರು, ಈ ಋತುವಿನಲ್ಲಿ ಎಲ್ಲಾ ಸ್ಪರ್ಧೆಗಳಲ್ಲಿ 44 ಗೋಲುಗಳನ್ನು ಗಳಿಸಿದ್ದಾರೆ.
ಯೋಗದ ಮೂಲಕ ಎರ್ಲಿಂಗ್ ಈ ರೀತಿಯ ಬೈಸಿಕಲ್ ಕಿಕ್ ಗಳನ್ನು ಅನಾಯಾಸವಾಗಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಎರ್ಲಿಂಗ್ ಮೂಲತ: ನಾರ್ವೆ ದೇಶದವರು. ನಾರ್ವೇಜಿಯನ್ ನಾಗರಿಕರು ಯೋಗದ ಬಗ್ಗೆ ವಿಶೇಷ ಆಸಕ್ತಿ ಉಳ್ಳವರಾಗಿದ್ದಾರೆ.