ಬೆಂಗಳೂರು, ಏ. 01 (DaijiworldNews/SM): ಈ ಬಾರಿಯ ಐಪಿಎಲ್ ನ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗುಜರಾತ್ ತಂಡ ಐದು ವಿಲೆಟ್ ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಏಳು ವಿಕೆಟ್ ಗಳ ನಷ್ಟಕ್ಕೆ 178 ರನ್ ಗಳಿಸಿತು. 92 ರನ್ ಸಿಡಿಸಿದ ಗಾಯಕ್ವಾಡ್ ತಂಡಕ್ಕೆ ನೆರವಾದರು. ಮೊಯಿನ್ ಅಲಿ 23 ರನ್ ಸಿಡಿಸಿದರು.
ಇದಕ್ಕೆ ಉತ್ತರವಾಗಿ ಗುಜರಾತ್ 19.2 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿ ಗೆಲುವಿನ ನಗೆ ಚೆಲ್ಲಿತು. ವೃದ್ದಿಮಾನ್ ಸಾಹಾ 25, ಗಿಲ್ 63 ರನ್ ಸಿಡಿಸಿ ತಂಡಕ್ಕೆ ನೆರವಾದರು.