ಮುಂಬೈ, ಮಾ 27 (DaijiworldNews/MS): ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿರುವ 'ಗಬ್ಬರ್' ಖ್ಯಾತಿಯ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಐಪಿಎಲ್ನಲ್ಲಿ ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಅವರು ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ, ರಾಜಕೀಯಕ್ಕೆ ಸೇರುವ ಯೋಜನೆ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದು ಅದಕ್ಕೆ ಅವರು ಕುತೂಹಲಕರವಾದ ಉತ್ತರ ನೀಡಿದ್ದಾರೆ. "ಸಧ್ಯ ಈ ರೀತಿಯ ಯಾವುದೇ ಯೋಜನೆಗಳು ನನ್ನ ಬಳಿ ಇಲ್ಲ. ಆದರೆ ಭವಿಷ್ಯದಲ್ಲಿ ಅಂತಹ ಯಾವುದೇ ಅವಕಾಶ ಸಿಕ್ಕರೆ, ನಾನು ಅದರಿಂದ ಹಿಂದೆ ಸರಿಯುವುದಿಲ್ಲ" ಎಂದಿದ್ದಾರೆ.
ಇಲ್ಲಿಯವರೆಗೆ, ನಾನು ರಾಜಕೀಯಕ್ಕೆ ಸೇರುವ ನನ್ನ ಯೋಜನೆಗಳ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ ಆದರೆ ದೇವರ ಇಚ್ಛೆ ಏನು ಎಂದು ನಿಮಗೆ ತಿಳಿದಿಲ್ಲ. ಅದು ದೇವರ ಇಚ್ಛೆಯಾಗಿದ್ದರೆ, ನಾನು ಖಂಡಿತವಾಗಿಯೂ ಅದನ್ನು ಸಾಧಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ನಾನು ಯಾವ ಕ್ಷೇತ್ರಕ್ಕೆ ಹೋದರೂ, ನಾನು ನನ್ನ ಶೇಕಡಾ 100 ಅನ್ನು ನೀಡುತ್ತೇನೆ ಹೀಗಾಗಿ ಯಶಸ್ಸು ಖಚಿತ ಎಂದು ನನಗೆ ತಿಳಿದಿದೆ. ನಾನು 11ನೇ ವಯಸ್ಸಿನಿಂದ ಕಷ್ಟಪಟ್ಟು ದುಡಿಯುತ್ತಿದ್ದೇನೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಇದೇ ರೀತಿಯ ಯಶಸ್ಸಿನ ಮಂತ್ರವಿದೆ ಎಂದು ಹೇಳಿದ್ದಾರೆ.