ನವದೆಹಲಿ, ಮಾ 17 (DaijiworldNews/DB): ರೋಹಿತ್ ಶರ್ಮಾ ಸದ್ಯ ಟೀಂ ಇಂಡಿಯಾದಿಂದ ರಜೆ ಪಡೆದುಕೊಂಡು ಬಾಮೈದುನನ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಪತ್ನಿಯ ತಮ್ಮನ ಮದುವೆಯಲ್ಲಿ ಶರ್ಮಾ ಪತ್ನಿ ಜೊತೆ ಸೇರಿ ಸಖತ್ ಸ್ಟೆಪ್ ಹಾಕಿ ಮದುವೆಯ ಕಳೆಯನ್ನು ಇಮ್ಮಡಿಗೊಳಿಸಿದ್ದಾರೆ.
ರೋಹಿತ್ ಶರ್ಮಾ ಮಡದಿಯ ತಮ್ಮ ಕುನಾಲ್ ಸಜ್ದೇಹ್ ಅವರ ಮದುವೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಿಂದಲೇ ರೋಹಿತ್ ಶರ್ಮಾ ರಜೆಯಲ್ಲಿದ್ದಾರೆ. ಇದೀಗ ಪತ್ನಿ ರಿತಿಕಾ ಅವರೊಂದಿಗೆ ಬಾಮೈದುನನ ಮದುವೆಯಲ್ಲಿ ಬ್ಯುಸಿಯಾಗಿರುವ ರೋಹಿತ್, ಸಂಗೀತ್ ಕಾರ್ಯಕ್ರಮಕ್ಕೆ ಭರ್ಜರಿ ಸ್ಟೆಪ್ ಹಾಕಿ ನೆರೆದವರ ಸಂಭ್ರಮ ಹೆಚ್ಚಿಸಿದ್ದಾರೆ.ರೋಹಿತ್ ಶರ್ಮಾ ಪತ್ನಿಯೊಂದಿಗೆ ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಕಪ್ಪು ಕುರ್ತಾ ಪೈಜಾಮ ಧರಿಸಿದ್ದ ರೋಹಿತ್ ಕೊರಳಿಗೆ ಕೆಂಪು ಚುನ್ನಿ ಧರಿಸಿದ್ದರು. ಮದುವೆಯ ಪ್ರತಿ ಕ್ಷಣದ ಫೋಟೋ, ವೀಡಿಯೋಗಳನ್ನು ರಿತಿಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಮದುವೆಯ ಝಲಕ್ನ್ನೂ ತೋರಿಸಿದ್ದಾರೆ.