ನವದೆಹಲಿ, ಮಾ 14 (DaijiworldNews/MS): ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್ಐ)ಯು ಐಬಿಎ ಮಹಿಳಾ ವಿಶ್ವ ಚಾಂಪಿಯನ್ಶಿಪ್ 2023 ರ ಪ್ರಚಾರ ರಾಯಭಾರಿಗಳಾಗಿ ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಬಾಲಿವುಡ್ ತಾರೆ ಫರ್ಹಾನ್ ಅಖ್ತರ್ ಅವರನ್ನು ನೇಮಿಸಿದೆ.
ಮಾ. 26 ರಂದು ನವದೆಹಲಿಯ ಇಂದಿರಾಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಟೂರ್ನಿ ಎಲ್ಲ ಪಂದ್ಯಗಳು ನಡೆಯಲಿದ್ದು, ಮಾರ್ಚ್ 15 ರಿಂದ ಈವೆಂಟ್ನ ಬ್ರಾಂಡ್ ಅಂಬಾಸಿಡರ್ ಮೇರಿ ಕೋಮ್, ಫರ್ಹಾನ್ ಅಖ್ತರ್ ಕಾಣಿಸಿಕೊಳ್ಳಲಿದ್ದಾರೆ.
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ಗೆ ಮೂರನೇ ಬಾರಿ ಆತಿಥ್ಯ ವಹಿಸುತ್ತಿರುವ ಭಾರತ ಈ ಟೂರ್ನಿಯನ್ನು ಯಶಸ್ವಿಯಾಗಿ ನಡೆಲು ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ಈ ಟೂರ್ನಿಗಾಗಿ ಈಗಾಗಲೇ 74 ದೇಶಗಳ 350ಕ್ಕೂ ಹೆಚ್ಚು ಬಾಕ್ಸರ್ಗಳು ತಮ್ಮ ಹೆಸರನ್ನು ನಂದಾಯಿಸಿದ್ದಾರೆ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದಾರೆ. 12 ಭಾರತೀಯ ಬಾಕ್ಸರ್ಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.