ನವದೆಹಲಿ, ಫೆ 01 (DaijiworldNews/DB): ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ಗೆ ಆಗಮಿಇದ ಹನುಮ ವಿಹಾರಿಯನ್ನು ಕಂಡು ಪ್ರೇಕ್ಷಕರು ಆಶ್ಚರ್ಯಚಕಿತರಾದ ಪ್ರಸಂಗ ನಡೆಯಿತು. ನಿನ್ನೆಯಷ್ಟೇ ಎಡಗೈಯ ಮೊಣಕೈ ಮೂಳೆ ಮುರಿತಕ್ಕೊಳಗಾಗಿದ್ದ ಈ ಎಡಗೈ ವೀರ ಇಂದು ಬಲಗೈ ಬಳಸಿ ಬ್ಯಾಟಿಂಗ್ ಮಾಡಿರುವುದು ಎಲ್ಲರನ್ನೂ ಚಕಿತಗೊಳಿಸಿತ್ತು.
ನಿನ್ನೆ ಮಧ್ಯಪ್ರದೇಶದ ಬೌಲರ್ ಆವೇಶ್ ಖಾನ್ ಬೌಲಿಂಗ್ ವೇಳೆ ಬಲಗೈಯ ಮೊಣಕೈಗೆ ತಾಗಿದ್ದು, ಬಳಿಕ ವೈದ್ಯರು ಪರೀಕ್ಷಿಸಿದಾಗ ಅವರ ಮೊಣಕೈ ಮೂಳೆ ಮುರಿದಿರುವುದು ಗೊತ್ತಾಗಿತ್ತು. ಆದರೆ ಇಂದು ಮಧ್ಯಪ್ರದೇಶದ ವಿರುದ್ದದ ಎರಡನೇ ಪಂದ್ಯದಲ್ಲಿ ಆಡಲು ಮತ್ತೆ ಹನುಮ ವಿಹಾರಿ ಮೈದಾನಕ್ಕಿಳಿದರು. 9ನೇ ವಿಕಟ್ ಪತನವಾಗುತ್ತಿದ್ದಂತೇ ಬ್ಯಾಟಿಂಗ್ಗೆ ಆಗಮಿಸಿದ ಹನುಮ ವಿಹಾರಿಯನ್ನು ಕಂಡು ಪ್ರೇಕ್ಷಕರು ಒಂದು ಕ್ಷಣ ಚಕಿತಗೊಂಡರು.
ಎಡಗೈಯಲ್ಲೇ ಬ್ಯಾಟಿಂಗ್ ಮಾಡುತ್ತಿದ್ದ ಈ ಎಡಗೈ ಬ್ಯಾಟಿಂಗ್ ವೀರ ಎಡಗೈಗೆ ಗಾಯವಾದ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ಬಲಗೈಯಲ್ಲೇ ಬ್ಯಾಟಿಂಗ್ ಮಾಡಿ ಯಾವುದೇ ಕ್ಷಣಕ್ಕೂ ಸೈ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.