ನವದೆಹಲಿ, ಜ 29 (DaijiworldNews/DB): ಮೆಲ್ಬೋರ್ನ್ನ ಟೆನ್ನಿಸ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಫೈನಲ್ ಪಂದ್ಯವು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಕೊನೆಯ ಪಂದ್ಯವಾಗಿತ್ತು. ಹೀಗಾಗಿ ಸಾನಿಯಾ-ರೋಹನ್ ಬೋಪಣ್ಣ ಜೋಡಿಯ ಮ್ಯಾಚ್ ನೋಡಲು ಇಬ್ಬರ ಕುಟುಂಬ ವರ್ಗದವರೂ ಸ್ಟೇಡಿಯಂನಲ್ಲಿ ಹಾಜರಿದ್ದರು.
ಈ ವೇಳೆ ರೋಹನ್ ಬೋಪಣ್ಣರ ಪತ್ನಿ ಸುಪ್ರಿಯಾ ಅಣ್ಣಯ್ಯ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ರೋಬೆಸ್ಟಿಯರ್ ಎಂಬ ಮಹಿಳೆಯೊಬ್ಬರು ರೋಹನ್ ಪತ್ನಿಯನ್ನು ಹಾಡಿ ಹೊಗಳಿದ್ದರು. ಮೋಸ್ಟ್ ಬ್ಯೂಟಿಫುಲ್ ವುಮನ್ ಎಂದು ಅವರು ಫೋಟೋ ಸಮೇತ ಟ್ವೀಟ್ ಮಾಡಿದ್ದರು. ಈ ಟ್ವೀಟ್ನ್ನು ರೀಟ್ವೀಟ್ ಮಾಡಿರುವ ರೋಹನ್ ಬೋಪಣ್ಣ, ನಿಜ, ಐ ಎಗ್ರೀ ಎಂದು ಬರೆದುಕೊಂಡಿದ್ದಾರೆ. ಸದ್ಯ ರೋಹನ್ ತಮ್ಮ ಪತ್ನಿಯ ಬಗೆಗಿನ ಹೊಗಳಿಕೆಯ ಪೋಸ್ಟ್ಗೆ ಹಾಕಿರುವ ಶೀರ್ಷಿಕೆ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಇನ್ನು ಈ ಟ್ವೀಟ್ಗೆ ಹಲವರು ಕಮೆಂಟ್ ಮಾಡಿದ್ದು, ಕೊಡವ ಸಮಾಜದ ಹುಡುಗಿಯರು ಯಾವಾಗಲೂ ಸೌಂದರ್ಯವತಿಯರೇ ಆಗಿರುತ್ತಾರೆ ಎಂದಿದ್ದಾರೆ. ಇನ್ನೊಬ್ಬರು ಕ್ಯಾಮರಾ ಎಲ್ಲಾ ಕಡೆಯೂ ಇರುತ್ತದೆ ಎಚ್ಚರಿಕೆ ಎಂದು ಕಾಮೆಂಟ್ ಹಾಕಿದ್ದಾರೆ.