ಮೆಲ್ಬರ್ನ್, ಜ 27 (DaijiworldNews/DB): ಆಸ್ಟ್ರೇಲಿಯನ್ ಓಪನ್ ಕೂಟದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ರನ್ನರ್ ಅಪ್ ಪ್ರಶಸ್ತಿಯೊಂದಿಗೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಸುದೀರ್ಘ ಗ್ರ್ಯಾಂಡ್ ಸ್ಲ್ಯಾಮ್ ಪ್ರಯಾಣವನ್ನು ಅಂತ್ಯಗೊಳಿಸಿದರು.
ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಬ್ರೆಜಿಲಿಯನ್ ಜೋಡಿಯಾದ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮ್ಯಾಟೋಸ್ ವಿರುದ್ಧ ಸೆಣಸಾಡಿದ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿ 6-7 (2-6), 2-6 ನೇರ ಸೆಟ್ ಗಳ ಅಂತರದಲ್ಲಿ ಪರಾಭವಗೊಂಡು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು.
36 ವರ್ಷದ ಸಾನಿಯಾ ಮಿರ್ಜಾ ಈ ಪಂದ್ಯದೊಂದಿಗೆ ತಮ್ಮ ಗ್ರ್ಯಾಂಡ್ ಸ್ಲ್ಯಾಮ್ ಪ್ರಯಾಣವನ್ನು ಅಂತ್ಯಗೊಳಿಸುವುದಾಗಿ ಈ ಹಿಂದೆಯೇ ಘೋಷಿಸಿದ್ದರು. ಆದರೆ ತಮ್ಮ ಪ್ರಯಾಣದ ಅಂತ್ಯವನ್ನು ಗೆಲುವಿನೊಂದಿಗೆ ಮಾಡಬೇಕೆಂಬ ಇಚ್ಚೆ ಹೊಂದಿದ್ದರಾದರೂ, ಅದು ಸಾಧ್ಯವಾಗಲಿಲ್ಲ.