ಬೆಂಗಳೂರು, ಜ 21( DaijiworldNews/MS): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ಶನಿವಾರ ಬೆಳಿಗ್ಗೆ ಹ್ಯಾಕರ್ ಡಿಸ್ಪ್ಲೇ ಚಿತ್ರವನ್ನು ಬದಲಾಯಿಸುವುದರ ಹೊರತಾಗಿ ಪ್ರೊಫೈಲ್ ಹೆಸರನ್ನು 'ಬೋರ್ ಅಪೆ ಯಾಚ್ ಕ್ಲಬ್' ಎಂದು ಬದಲಾಯಿಸಿ ಎನ್ಎಫ್ ಟಿ ಸಂಬಂಧಿತ ಟ್ವೀಟ್ ಗಳನ್ನು ಳನ್ನು ಪೋಸ್ಟ್ ಮಾಡಿದ್ದಾರೆ.
ಅಭಿಮಾನಿಗಳು ಮತ್ತು ಇತರ ಟ್ವಿಟರ್ ಬಳಕೆದಾರರು ಆರ್ ಸಿಬಿ ಖಾತೆಯನ್ನು ಹ್ಯಾಕ್ ಮಾಡಿರುವುದನ್ನು ಗಮನಿಸಿದ್ದಾರೆ. ಆದರೆ ಇದುವರೆಗೆ ಅಕೌಂಟ್ ಹ್ಯಾಕ್ ಮಾಡಿರುವುದನ್ನು ಸರಿಪಡಿಸಲಾಗಿಲ್ಲ.