ರೂರ್ಕೆಲಾ, ಜ 13 ( DaijiworldNews/MS): ಇಂದಿನಿಂದ ದೇಶದಲ್ಲಿ ಪುರುಷರ ಹಾಕಿ ವಿಶ್ವಕಪ್ ಕಲವರ ಮನೆಮಾಡಲಿದೆ. 2023ರ ಹಾಕಿ ವಿಶ್ವಕಪ್ಗೆ ಒರಿಸ್ಸಾ ಆತಿಥ್ಯ ವಹಿಸುತ್ತಿದ್ದು, ಬುಧವಾರ ಸಂಜೆ ಕಟಕ್ನ ಸುಂದರವಾದ ಬಾರಾಬತಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಕ್ರೀಡಾಕೂಟ ಉದ್ಘಾಟನೆಗೊಂಡಿದೆ.
ಭಾರತವು ಹಾಕಿ ವಿಶ್ವಕಪ್ ಗೆಲ್ಲದೆ 48 ವರ್ಷಗಳು ಕಳೆದಿವೆ. 1975 ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊನೆಯದಾಗಿ ಚಾಂಪಿಯನ್ ಅಗಿತ್ತು. ಅಜಿತ್ ಪಾಲ್ ಸಿಂಗ್ ಅವರು ತಂಡದ ನಾಯಕರಾಗಿದ್ದರು. ಹಾಕಿ ಕ್ರೀಡೆಯ ಗತವೈಭವ ಮರಳಿ ಪಡೆಯಬೇಕೆಂಬ ಗುರಿ ಹೊಂದಿರುವ ಭಾರತ ಹೊಂದಿದ್ದು, ಇಂದಿನಿಂದ ನಡೆಯಲಿರುವ 15ನೇ ಆವೃತ್ತಿಯ ಎಫ್ಐಎಚ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ಸ್ಪೇನ್ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.
ಯಾರಿದ್ದಾರೆ ಭಾರತ ತಂಡದಲ್ಲಿ?
ಹರ್ಮನ್ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್ (ಉಪನಾಯಕ), ಅಭಿಷೇಕ್, ಸುರೇಂದರ್ ಕುಮಾರ್, ಮನ್ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಜರ್ಮನ್ಪ್ರೀತ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಕೃಷ್ಣ ಪಾಠಕ್, ನೀಲಂ ಸಂಜೀಪ್ ಸೆಸ್, ಪಿ.ಆರ್.ಶ್ರೀಜೇಶ್, ನೀಲಕಂಠ ಶರ್ಮ, ಶಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶ್ದೀಪ್ ಸಿಂಗ್, ವಿವೇಕ್ ಸಾಗರ್ ಮತ್ತು ಸುಖ್ಜೀತ್ ಸಿಂಗ್