ನವದೆಹಲಿ, ಡಿ 27 (DaijiworldNews/DB): ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಫರ್ಹಾನ್ ಬೆಹಾರ್ಡಿಯನ್ ಅವರು ಕ್ರಿಕೆಟ್ ವೃತ್ತಿ ಜೀವನಕ್ಕೆ ಮಂಗಳವಾರ ವಿದಾಯ ಹೇಳಿದ್ದಾರೆ.
18 ವರ್ಷ ದಕ್ಷಿಣ ಆಫ್ರಿಕಾ ತಂಡದಲ್ಲಿ ಮಿಂಚಿದ್ದ 39ರ ಹರೆಯದ ಫರ್ಹಾನ್ ಕ್ರಿಕೆಟ್ನಿಂದ ನಿವೃತ್ತಿ ಪಡೆಯುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಕಳೆದ ಹದಿನೆಂಟು ವರ್ಷಗಳಿಂದ ನನಗೆ ಕ್ರಿಕೆಟ್ ಆಟವೇ ಸರ್ವಸ್ವ ಆಗಿತ್ತು. ಕಳೆದ ಕೆಲ ವಾರಗಳಿಂದ ಭಾವುಕನಾಗಿದ್ದೆ. ಬದುಕು ನೀಡಿದ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ ಎಂದವರು ಹೇಳಿದ್ದಾರೆ. ಇದೇ ವೇಳೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.
97 ಕ್ಯಾಪ್ಗಳು, ಕ್ಯಾಬಿನೆಟ್ನಲ್ಲಿ 17 ಟ್ರೋಫಿಗಳು ಮತ್ತು 4 ವಿಶ್ವಕಪ್ ಸೇರಿದಂತೆ ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿಯೂ ಆಡಿರುವ ಫರ್ಹಾನ್ ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್ ಆಗಿಯೇ ಖ್ಯಾತಿಯಾದವರು. ಈವರೆಗೆ 560 ಪಂದ್ಯಗಳನ್ನು ಆಡಿದ್ದಾರೆ.