ನವದೆಹಲಿ, ಡಿ 24 (DaijiworldNews/DB): ನಿನ್ನೆಯಷ್ಟೇ ಐಪಿಎಲ್ ಮಿನಿ ಆಕ್ಷನ್ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ವಿಶೇಷವೆಂದರೆ ತಮ್ಮ ದಾಖಲೆಯ ಮೊತ್ತಕ್ಕೆ ಸೇಲ್ ಆದರೆ ಅಣ್ಣನನ್ನು ಯಾವುದೇ ತಂಡ ಖರೀದಿ ಮಾಡದಿರುವುದು.
ಹೌದು. ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದರು. ಆದರೆ ತಮ್ಮ ಇಷ್ಟು ಗರಿಷ್ಠ ಮೊತ್ತಕ್ಕೆ ಸೇಲ್ ಆದರೆ, ಅವರ ಅಣ್ಣ ಟಾಮ್ ಕರನ್ ಅವರನ್ನು ಮಾತ್ರ ಯಾವುದೇ ತಂಡ ಖರೀದಿಸಲಿಲ್ಲ. ಟಾಮ್ ಕರನ್ ಅನ್ ಸೋಲ್ಡ್ ಆಗಿದ್ದಾರೆ.
ಸ್ಯಾಮ್ ಕರನ್ 18.50 ಕೋಟಿ ರೂ.ಗಳಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇಲ್ ಆಗಿದ್ದರು. ಇದು ದಾಖಲೆಯ ಮೊತ್ತವಾದ ಕಾರಣ ಶುಕ್ರವಾರವಿಡೀ ಸ್ಟಾಮ್ ಕರನ್ ಹೆಸರೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಏಕೆಂದರೆ ಇಷ್ಟೊಂದು ಮತ್ತೊದ ಖರೀದಿಯಾಗಿರುವುದು ಇದೇ ಮೊದಲು. 2016ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ ರೂ.ಗಳಿಗೆ ಖರೀದಿ ಮಾಡಿತ್ತು. ಇದೀಗ ಮೋರಿಸ್ ದಾಖಲೆಯನ್ನು ಕರನ್ ಪುಡಿಗಟ್ಟಿದ್ದರು.
ಆದರೆ ಸ್ತಾಮ್ ಕರನ್ ಅಣ್ಣ ಟಾಮ್ ಕರನ್ ಮಾತ್ರ ಉತ್ತಮ ಆಟಗಾರನಾಗಿ ಹೆಸರು ಪಡೆದರೂ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಟಾಮ್ ಐಪಿಎಲ್ನಲ್ಲಿ ಕಳೆದ ಮೂರು ಸೀಸನ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದರು.