ನಾಗ್ಪುರ, ಮಾ 06(SM): ಆಸ್ಟ್ರೇಲಿಯಾ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಗೆಲುವು ದಾಖಲಿಸಿದೆ. ಭಾರತದ ಗೆಲುವಿಗೆ ಅಂತಿಮ ಓವರೇ ಕಾರಣವಾಗಿದೆ.
ಅಂತಿಮ ಓವರ್ ಬೌಲಿಂಗ್ ಮಾಡಿದ ವಿಜಯ್ ಶಂಕರ್ 2 ವಿಕೆಟ್ ಗಳನ್ನು ಉರುಳಿಸುವ ಮೂಲಕ ಭಾರತಗೆ ಗೆಲುವುಗೆ ಕಾರಣೀಕರ್ತರಾಗಿದ್ದಾರೆ. ಪಂದ್ಯ ನಿರ್ಣಾಯಕ ಹಾಗೂ ಕುತೂಹಲದ ಘಟ್ಟ ತಲುಪುತ್ತಿದ್ದಂತೆ ಅಂತಿಮಾ ಓವರ್ ವಿಜಯ್ ಅವರಿಗೆ ಯಾಕೆ ನೀಡಿದರೂ ಎಂಬ ಆತಂಕ ಎದುರಾಗಿತ್ತು. ಈ ಬಗ್ಗೆ ಚರ್ಚೆಗಳು ಕೂಡ ನಡೆದಿತ್ತು. ಆದರೆ ಅಂತಿಮ ಓವರ್ ನಲ್ಲಿ ಕಮಾಲ್ ಮಾಡಿದ ವಿಜಯ್ 2 ವಿಕೆಟ್ ಗಳನ್ನು ಪಡೆದು ಆಸ್ಟ್ರೇಲಿಯಾ ತಂಡದ ಸರ್ವ ಪತನಕ್ಕೆ ಕಾರಣರಾದರು.
ನಿನ್ನೆ ಅಂತಿಮ ಹಂತದಲ್ಲಿ ಪಂದ್ಯ ರೋಚಕ ಘಟ್ಟಕ್ಕೆ ತಲುಪಿತ್ತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಆಲ್ರೌಂಡ್ ಮಾರ್ಕಸ್ ಸ್ಟೋಯ್ನಿಸ್ ಕ್ರೀಸ್ ಕಚ್ಚಿ ನಿಂತಿದ್ದರು. ಅಂತಿಮ ಓವರ್ನಲ್ಲಿ ಆಸೀಸ್ ಗೆಲುವು ಸಾಧಿಸಲು 6 ಬಾಲ್ಗಳಲ್ಲಿ 11 ರನ್ಗಳಿಸಬೇಕಿತ್ತು. ಪ್ರಮುಖ ಬೌಲರ್ಗಳೆಲ್ಲ ತಮ್ಮ ಪಾಲಿನ ಓವರ್ಗಳನ್ನ ಮುಗಿಸಿ ಫಿಲ್ಡಿಂಗ್ ನಲ್ಲಿದ್ದರು. ಈ ಸಂದರ್ಭ ಉಳಿದ ಆಯ್ಕೆ ಇದ್ದದ್ದು, ಕೇದಾರ್ ಜಾದವ್ ಅಥವಾ ವಿಜಯ್ ಶಂಕರ್. ಬೇರೆ ಅನುಭವಿ ಬೌಲರ್ ಗಳಿಗೆ ಸ್ಪೆಲ್ ಮಾಡಲು ಚೆಂಡು ನೀಡುವ ಅವಕಾಶ ಕೊಹ್ಲಿ ಪಾಲಿಗಿರಲಿಲ್ಲ.
ಮೊದಲ ಓವರ್ನಲ್ಲೇ ದುಬಾರಿಯಾಗಿದ್ದ ವಿಜಯ್ ಶಂಕರ್ಗೆ ಅಂತಿಮ ಓವರ್ ಸಿಗೋದು ಬಹುತೇಕ ಅನುಮಾನವೇ ಆಗಿತ್ತು. ಆದರೆ ಗಟ್ಟಿ ನಿರ್ಧಾರ ಕೈಗೊಂಡ ಕ್ಯಾಪ್ಟನ್ ಕೊಹ್ಲಿ, ವಿಜಯ್ ಶಂಕರ್ ಕೈಗೆ ಚೆಂಡು ನೀಡಿದರು. ಈ ಸಂದರ್ಭ ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಹಲವಾರು ಅಭಿಮಾನಿಗಳು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಕ್ಯಾಪ್ಟ್ ನ್ ನಿರ್ಧಾರವನ್ನು ಟೀಕಿಸಿದ್ದರು.
ಆದರೆ, ವಿಜಯ್ ಶಂಕರ್ ತಂಡ ಹಾಗೂ ನಾಯಕನ ಭರವಸೆ ಉಳಿಸಿಕೊಂಡು, ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಹಾಗೂ ಭಾರತದ ಗೆಲುವಿಗೆ ಪ್ರಮುಖ ಕಾರಣ ಎನಿಸಿಕೊಂಡಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಚಾರವೊಂದಿದೆ. ನಿರ್ಣಾಯಕವಾಗಿದ್ದ ಅಂತಿಮ ಓವರ್ ವಿಜಯ ಕೈಗೆ ನೀಡಲು ನಾಯಕ ಕೊಹ್ಲಿಗೆ ಸಲಹೆ ನೀಡಿದ್ದು ಧೋನಿ ಮತ್ತು ರೋಹಿತ್ ಶರ್ಮಾ. ಹೀಗೆಂದು ನಾಯಕ ಕೊಹ್ಲಿ ಹೇಳಿಕೊಂಡಿದ್ದಾರೆ. ನಾನು 46ನೇ ಓವರ್ನಲ್ಲಿ ವಿಜಯ್ ಶಂಕರ್ ಅಥವಾ ಕೇದಾರ್ ಜಾಧವ್ಗೆ ಅವಕಾಶ ನೀಡಬೇಕು ಎಂದುಕೊಂಡಿದ್ದೆ. ಈ ಬಗ್ಗೆ ಅವರ ಸಲಹೆ ಪಡೆದೆ. ಆದರೇ, ಅಂತಿಮ ಹಂತದಲ್ಲಿ ಬೂಮ್ರಾ ಅಥವಾ ಶಮಿ ವಿಕೆಟ್ ಪಡೆದರೆ, ಗೆಲುವು ನಮ್ಮದೇ ಎಂದು ಮಾಹಿ ಸಲಹೆ ನೀಡಿದ್ದರು.
ಅಂತೆಯೇ ಬೂಮ್ರಾ 2 ವಿಕೆಟ್ ಪಡೆಯೋ ಮೂಲಕ ಪಂದ್ಯವನ್ನ ಬದಲಾಯಿಸಿದರು ಎಂದಿದ್ದಾರೆ ಕೊಹ್ಲಿ.