ನಾಗಪುರ, ಮಾ 05(SM): ಇಲ್ಲಿನ ವಿದರ್ಬ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ೨ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್ ಗಳಿಂದ ರೋಚಕ ಗೆಲುವು ದಾಖಲಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ ಶರ್ಮಾ ರನ್ ಪೇರಿಸಲು ವಿಫಲರಾಗಿ ಸೊನ್ನೆ ಸುತ್ತಿಕೊಂಡು ಫೆವಿಲಿಯನ್ ನತ್ತ ನಡೆದರು. ಇತ್ತ ಶಿಖರ್ ಧವನ್ ಕೇವಲ 21 ರನ್ ಪೇರಿಸಲು ಮಾತ್ರ ಶಕ್ತರಾದರು.
ಬಳಿಕ ಅಂಗಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಆಕರ್ಷಕ 116ರನ್ ಗಳ ಶತಕ ಸಿಡಿಸಿ ತಂಡಕ್ಕೆ ನೆರವಾದರು. ವಿಜಯ್ ಶಂಕರ್ 46 ರನ್ ಮಾಡಿದ್ದು ಬಿಟ್ಟರೆ ಯಾವೊಬ್ಬ ಆಟಗಾರ ಉತ್ತಮ ಪ್ರದರ್ಶನ ತೋರಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 48.2 ಓವರ್ ಗಳಲ್ಲಿ 250 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.
ಇನ್ನು ಇದಕ್ಕೆ ಉತ್ತರವಾಗಿ ಆಸಿಸ್ ತಂಡ ಉತ್ತಮವಾಗಿಯೇ ಪ್ರತಿಕ್ರಿಯೆ ನೀಡಿತು. ಆರಂಭಿಕರಾದ ಆರೊನ್ ಪಿಂಚ್ 37, ಉಸ್ಮಾನ್ ಖಾವಜ 38 ರನ್ ಪೇರಿಸುವ ಮೂಲಕ ತಂಡಕ್ಕೆ ನೆರವಾದರು. ಅಂತಿಮವಾಗಿ 242 ರನ್ ಗಳಿಗೆ ಆಸ್ಟ್ರೇಲಿಯಾ ತನ್ನೆಲ್ಲ ವಿಕೆಟ್ ಗಳಾನ್ನು ಕಳೆದುಕೊಂಡು ಭಾರತಕ್ಕೆ ಶಾರಣಾಯಿತು.
ಆ ಮೂಲಕ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.