ಮುಂಬೈ, ಮಾ 05(SM): ಉಗ್ರರಿಗೆ ತಮ್ಮಲ್ಲಿ ಬೆಂಬಲವನ್ನು ನೀಡುತ್ತಿರುವ ಹಾಗೂ ಇತ್ತೀಚೆಗೆ ಪುಲ್ವಾಮಾ ದಾಳಿಗೆ ಕಾರಣವಾದ ಉಗ್ರರ ವಿರುದ್ಧ ಕ್ರಮಕೈಗೊಳ್ಳದ ಪಾಕಿಸ್ತಾನವನ್ನು ವಿಶ್ವಕಪ್ ಟೂರ್ನಿಯಿಂದ ಕೈಬಿಡಬೇಕೆಂಬ ಭಾರತೀಯರ ಬೇಡಿಕೆ ಮಣ್ಣುಪಾಲಾಗಿದೆ. ಪಾಕಿಸ್ತಾನ ತಂಡವನ್ನು ಕೈಬಿಡಬೇಕು ಎಂದಿದ್ದ ಬಿಸಿಸಿಐ ಮನವಿಯನ್ನ ಐಸಿಸಿ ತಿರಸ್ಕಾರ ಮಾಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಎ.ಚೌಧರಿ ಹೇಳಿದ್ದಾರೆ.
ಭಯೋತ್ಪಾದನೆ ಪೋಷಿಸುತ್ತಿದೆ ಎಂಬ ಕಾರಣದಿಂದ ಪಾಕಿಸ್ತಾನವನ್ನು ಕೈಬಿಡಲು ಸಾಧ್ಯವಿಲ್ಲ. ಐಸಿಸಿ ವ್ಯಾಪ್ತಿಯಲ್ಲಿ ಅಂಥಾ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಐಸಿಸಿ ತಿಳಿಸಿದೆ.
ಈ ನಡುವೆ ಟೂರ್ನಮೆಂಟ್ ವೇಳೆ ಪ್ರೇಕ್ಷಕರು ಮತ್ತು ಆಟಗಾರರಿಗೆ ಭದ್ರತೆ ಒದಗಿಸುವ ಬಗ್ಗೆ ಐಸಿಸಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಭದ್ರತೆ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಐಸಿಸಿ ತಿಳಿಸಿದೆ. ಸೂಕ್ತ ರೀತಿಯ ಭದ್ರತೆಯನ್ನು ನೀಡಲು ತೀರ್ಮಾನವನ್ನು ಕೈಗೊಂಡಿದೆ ಎಂದು ಎ.ಚೌಧರಿ ತಿಳಿಸಿದ್ದಾರೆ.