ಹೈದರಾಬಾದ್, ಮಾ 04(SM): ಕ್ರಿಕೆಟ್ ಲೋಕದಲ್ಲಿ ದಾಖಲೆಗಳು ಒಬ್ಬರದೇ ಹೆಸರಲ್ಲಿ ಅನ್ನೋದು ಶಾಶ್ವತವಲ್ಲ. ಪಂದ್ಯದಿಂದ ಪಂದ್ಯಕ್ಕೆ ದಾಖಲೆಗಳು ಬದಲಾಗುತ್ತವೆ. ಟೀಂ ಇಂಡೀಯಾದ ಕ್ರಿಕೆಟ್ ಜಗತ್ತಿನ ದೇವರು ಎಂದೇ ಪ್ರಸಿದ್ದಿಯಾಗಿರುವ ಸಚಿನ್ ಹಾಗೂ ಸುರೇಶ್ ರೈನಾ ಸುಮಾರು 10 ವರ್ಷದ ಹಿಂದೆ ಬರೆದಿದ್ದ ದಾಖಲೆ ಇದೀಗ ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಯುವ ಆಟಗಾರ ಕೇದರ್ ಜಾದವ್ ಮುರಿದಿದ್ದಾರೆ.
ಹತ್ತು ವರ್ಷದ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ಸುರೇಶ್ ರೈನಾ ಅಜೇಯ 137 ರನ್ ಗಳ ದಾಖಲೆಯ ಜತೆಯಾಟವಾಡಿದ್ದರು. ಇದನ್ನು ಮಾರ್ಚ್ 02ರಂದು ಹೈದರಾಬಾದ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ ಹಾಗೂ ಕೇದರ್ ಜಾದವ್ ಜೋಡಿ ಮುರಿದಿದೆ.
ಶನಿವಾರ ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧೋನಿ-ಕೇದಾರ್ ಜಾಧವ್ 5ನೇ ವಿಕೆಟ್ಗೆ ಅಜೇಯ 141 ರನ್ ಜತೆಯಾಟವಾಡುವ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೂಲಕ ಧೋನಿ ಹಾಗೂ ಜಾದವ್ ಎರಡನೇ ಬಾರಿಗೆ 100 ರನ್ ಗಳ ಜೊತೆಯಾಟವಾಡಿದಂತಾಗಿದೆ.
ಇನ್ನು ಸಚಿನ್ ಹಾಗೂ ಸುರೇಶ್ ರೈನಾ 2009ರಲ್ಲಿ ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ 5ನೇ ವಿಕೆಟ್ಗೆ ಅಜೇಯ 121 ರನ್ ಜತೆಯಾಟವಾಡಿದ್ದರು. ಪ್ರಮುಖ ವಿಚಾರವೆಂದರೆ, ಇಲ್ಲಿ ಎರಡು ದಾಖಲೆಗಳು ಆಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹಾಗೂ 5ನೇ ವಿಕೆಟ್ ಗೆ ಎನ್ನುವುದು ಗಮನಾರ್ಹವಾಗಿದೆ.