ಸೇಂಟ್ ಲೂಸಿಯಾ, ಮಾ 03(SM): ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್ ತಂಡ ಉತ್ತಮ ಪ್ರದರ್ಶವನ್ನೇನೋ ನೀಡಿದೆ. ಇದಕ್ಕೆ ಕಾರಣ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚುತ್ತಿರುವ ಕ್ರಿಸ್ ಗೇಲ್. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಸಿಡಿದ ಗೇಲ್ ಭರ್ಜರಿಯಾಗಿಯೇ ಬ್ಯಾಟಿಂಗ್ ನಡೆಸಿದ್ದು, ಎದುರಾಳಿಗಳ ಬೆವರಿಳಿಸಿದ್ದಾರೆ. ಹಾಗೂ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಆಡಿರುವ 4 ಪಂದ್ಯಗಳಲ್ಲಿ ಗೇಲ್ 135, 50, 162 ಹಾಗೂ ಕೊನೆಯ ಪಂದ್ಯದಲ್ಲಿ 77 ರನ್ಗಳಿಸುವ ಮೂಲಕ ಒಟ್ಟಾರೆ 424 ರನ್ಗಳಿಸುವ ಮೂಲಕ ಕೇವಲ 4 ಪಂದ್ಯಗಳಲ್ಲಿ ಅತ್ಯಧಿಕ ರನ್ ಪೇರಿಸಿರುವ ದಾಖಲೆಯನ್ನು ಬರೆದಿದ್ದಾರೆ.
ಇನ್ನು ಇದೇ ಸರಣಿಯಲ್ಲಿ 10000 ರನ್ ಗಳ ಗಡಿಯನ್ನು ಗೇಲ್ ದಾಟಿದ್ದಾರೆ. ಏಕದಿನ ಕ್ರಿಕೆಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಡಿ ದಾಟಿದ 14 ನೇ ಆಟಗಾರ ಹಾಗೂ ವಿಂಡೀಸ್ನ 2ನೇ ಆಟಗಾರ ಎಂಬ ಕೀರ್ತಿಗೆ ಗೇಲ್ ಪಾತ್ರರಾಗಿದ್ದಾರೆ. ಇನ್ನು ಪ್ರಮುಖವಾಗಿ ಏಕದಿನ ಪಂದ್ಯದಲ್ಲಿ 500 ಸಿಕ್ಸರ್ ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ಗೇಲ್ ಪಾತ್ರರಾಗಿದ್ದು, ೫೧೫ ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.