ಬೊಗೋಟಾ, ಡಿ 07( DaijiworldNews/MS): ಕೊಲಂಬಿಯಾದ ಬೊಗೋಟಾದಲ್ಲಿ ಮಂಗಳವಾರ ನಡೆದ 2022ರ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.
ಚಾನು ಸ್ನ್ಯಾಚ್ನಲ್ಲಿ 87 ಕೆಜಿ ಮತ್ತು ಕ್ಲೀನ್ & ಜರ್ಕ್ನಲ್ಲಿ 113 ಕೆಜಿಯೊಂದಿಗೆ ಒಟ್ಟು 200 ಕೆಜಿ ಎತ್ತುವ ಮೂಲಕ ರಜತಪದಕ ಗೆದ್ದಿದ್ದಾರೆ. ಇತರ ಸ್ಪರ್ಧಿಗಳಾದ ಜಿಯಾಂಗ್ ಹುಯಿಹುವಾ (206 ಕೆಜಿ: 93+113 ಕೆಜಿ) ಮತ್ತು ಚೀನಾದ ಒಲಿಂಪಿಕ್ ಚಾಂಪಿಯನ್ ಹೌ ಝಿಹುವಾ (198 ಕೆಜಿ: 89+109 ಕೆಜಿ) ಪಡೆದಿದ್ದರು. ಇದು ಜಿಯಾಂಗ್ ಅವರ ಮೂರನೇ ವಿಶ್ವ ಚಾಂಪಿಯನ್ಶಿಪ್ ಚಿನ್ನವಾಗಿದೆ.
ಈ ಹಿಂದೆ 2017 ರ ವಿಶ್ವ ಚಾಂಪಿಯನ್ಶಿಪ್ನಲ್ಲಿ 194 ಕೆಜಿ (85 ಕೆಜಿ ಜೊತೆಗೆ 109 ಕೆಜಿ) ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದ ಚಾನು ಅವರ ವಿಶ್ವ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಇದು ಎರಡನೇ ಪದಕವಾಗಿದೆ. ಅವರು 2019 ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು
2017ರ ವಿಶ್ವ ಚಾಂಪಿಯನ್ ಚಾನು ಸೆಪ್ಟೆಂಬರ್ನಲ್ಲಿ ನಡೆದ ತರಬೇತಿ ವೇಳೆ ಮಣಿಕಟ್ಟಿಗೆ ಗಾಯ ಮಾಡಿಕೊಂಡಿದ್ದರು. ಅವರು ಅಕ್ಟೋಬರ್ ನಲ್ಲಿ ಗಾಯದೊಂದಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದರು.