ಬ್ರೆಜಿಲ್, ಡಿ 02 (DaijiworldNews/DB): ಫಿಫಾ ವಿಶ್ವಕಪ್ 2022ರ ಪ್ರಿ-ಕ್ವಾರ್ಟರ್ಫೈನಲ್ ಸುತ್ತು ಆರಂಭವಾಗುವುದಕ್ಕೆ ಮುನ್ನ ಬ್ರೆಜಿಲಿಯನ್ ಮಾಡೆಲ್ವೊಬ್ಬರು ತಮ್ಮ ತಂಡ ಸೋಲನುಭವಿಸಿದ್ದಲ್ಲಿ ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡು ಸುದ್ದಿಯಾಗಿದ್ದಾರೆ. ಪ್ರತಿ ಸೋಲಿಗೆ ಒಂದೊಂದು ಟಾಪ್ಲೆಸ್ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸುವುದಾಗಿ ಹೇಳಿಕೊಂಡಿದ್ದಾರೆ.
ಬ್ರೆಜಿಲಿಯನ್ ಮಾಡೆಲ್, 24ರ ಹರೆಯದ ಡಯೇನ್ ಟೊಮಾಝೋನಿ ಅವರೇ ಈ ನಿರ್ಧಾರ ಕೈಗೊಂಡವರು. ತಮ್ಮ ದೇಶದ ತಂಡ ಸದಾ ಗೆಲುವಿನ ತುದಿಗೇರಬೇಕೆಂದು ಬಯಸಿರುವ ಅವರು, ಬ್ರೆಜಿಲ್ ಸೋತರೆ ಇನ್ಸ್ಟಾಗ್ರಾಂನಲ್ಲಿ ಟಾಪ್ಲೆಸ್ ಚಿತ್ರ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಪ್ರತಿ ಬಾರಿ ಬ್ರೆಜಿಲ್ ಸೋತಾಗಲೂ ನಾನು ಒಂದೊಂದು ಟಾಪ್ಲೆಸ್ ಚಿತ್ರ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ ಅವರು.
ಇನ್ನು ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಅವರಿಗೆ ಈಗಾಗಲೇ ಸಾವಿರಾರು ಮಂದಿ ಫಾಲೋವರ್ಸ್ಗಳಿದ್ದಾರೆ.
ಬ್ರೆಜಿಲ್ ತಂಡ ಸ್ವಿಟ್ಜರ್ಲೆಂಡ್ ವಿರುದ್ಧ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದಾಗಲೂ ಇದೇ ರೀತಿ ಟಾಪ್ಲೆಸ್ ಫೋಟೋ ಹಂಚಿಕೊಂಡಿರುವುದಾಗಿ ಮಾಡೆಲ್ ಹೇಳಿಕೊಂಡಿದ್ದಾರೆ.