ವಿಜಯಪುರ, ಡಿ 01 (DaijiworldNews/DB): ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರ ಮೇಲೆ ಹಲ್ಲೆ ಆರೋಪವೊಂದು ಕೇಳಿ ಬಂದಿದೆ. ಸೂಪರ್ ಮಾರ್ಕೆಟ್ ಮಾಲಕ ಮತ್ತವರ ಪುತ್ರನಿಗೆ ಆಟಗಾರ್ತಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್ಗೆ ರಾಜೇಶ್ವರಿ ತನ್ನ ಸ್ನೇಹಿತರೊಂದಿಗೆ ತೆರಳಿದ್ದರು. ಈ ವೇಳೆ ಕೆಲವು ಕಾಸ್ಮೆಟಿಕ್ ವಸ್ತುಗಳನ್ನು ಖರೀದಿಸಿದ್ದಾರೆ. ಬಳಿಕ ಅಲ್ಲಿಂದ ಹಿಂತಿರುಗುವ ವೇಳೆ ಭದ್ರತಾ ಸಿಬಂದಿ ಜೊತೆ ಗಲಾಟೆ ಮಾಡಿದ್ದು, ಈ ವೇಳೆ ಪ್ರಶ್ನಿಸಿದ ಸೂಪರ್ ಮಾರ್ಕೆಟ್ ಮಾಲಕ ಮಲ್ಲಿಕಾರ್ಜುನ್ ಮತ್ತು ಅವರ ಪುತ್ರನ ಮೇಲೂ ಕ್ರಿಕೆಟ್ ಆಟಗಾರ್ತಿ ಕೈ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬುಧವಾರ ಸಂಜೆ ಘಟನೆ ನಡೆದಿದೆ ಎನ್ನಲಾಗಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆದರೆ ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಶ್ವರಿ, ಸೂಪರ್ ಮಾರ್ಕೆಟ್ನಲ್ಲಿ ಯಾವುದೇ ಗಲಾಟೆ ಮಾಡಿಲ್ಲ ಎಂದು ತಿಳಿಸಿದ್ದಾರೆ.