ನವದೆಹಲಿ, ನ 21 (DaijiworldNews/DB): ದೇಶದಲ್ಲಿ ನಡೆದ ಫುಟ್ಬಾಲ್ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಿಬಿಐಯಿಂದ ತನಿಖೆ ಆರಂಭಗೊಂಡಿದ್ದು, ಇದಕ್ಕಾಗಿ ಫುಟ್ಬಾಲ್ ಕ್ಲಬ್ಗಳ ಸಹಕಾರ ಕೋರಿದೆ.
ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಕಳೆದ ಹದಿನೈದು ದಿನಗಳ ಹಿಂದೆಯೇ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ವಿಚಾರಣಾ ಸಮಯದಲ್ಲಿ ಭಾರತೀಯ ಫುಟ್ಬಾಲ್ ಕ್ಲಬ್ಗಳ ಸಹಕಾರ ಕೋರಲಾಗಿದೆ. ದಾಖಲೆಗಳನ್ನು ಒದಗಿಸುವಂತೆ ಅಖಿಲ ಭಾರತ ಫುಟ್ಬಾಲ್ ಫೆಡೆರೇಶನ್ಗೆ ಕೇಳಲಾಗಿದೆ. ತನಿಖೆಗೆ ನೆರವಾಗುವಂತೆ ಫುಟ್ಬಾಲ್ ಕ್ಲಬ್ಗಳ ಸಹಕಾರ ಕೋರಲಾಗಿದೆ.
ಇನ್ನು ಪಂದ್ಯಗಳ ಫಲಿತಾಂಶ ನೀಡುವಲ್ಲಿ ಸಿಂಗಾಪುರ ಮೂಲದ ಆಪಾದಿತ ಮ್ಯಾಚ್ ಫಿಕ್ಸರ್ವೊಬ್ಬನ ಪಾತ್ರವಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದ ಅಧಿಕಾರಿಗಳು, ತನಿಖೆ ಪ್ರಗತಿಯಲ್ಲಿರುವ ಕಾರಣ ಶಂಕಿತ ಆರೋಪಿಯ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು. ಹಲವು ದಾಖಲೆಗಳು ಈಗಾಗಲೇ ನಮ್ಮ ಕೈಸೇರಿದ್ದು, ಇನ್ನೂ ಕೆಲವು ದಾಖಲೆಗಳು ಸಿಗಬೇಕಿದೆ ಎಂದರು.