ಡೆಹರಡೂನ್, ಫೆ 23(SM): ಟಿ-20 ಪಂದ್ಯದಲ್ಲಿ ಅಫ್ಘಾನಿಸ್ತಾನ ಹೊಸ ದಾಖಲೆ ನಿರ್ಮಿಸಿದೆ. ಐರ್ಲೆಂಡ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ 278 ರನ್ ಗಳಿಸುವ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಅಫ್ಘಾನ್ ತಂಡ 20 ಓವರ್ಗಳಲ್ಲಿ 278 ರನ್ಗಳ ಬೃಹತ್ ಮೊತ್ತ ಕಲೆಹಾಕಿ ವಿಶ್ವದಾಖಲೆ ನಿರ್ಮಿಸಿತು. ಈ ಹಿಂದೆ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ 263 ರನ್ ಗಳಿಸಿದ್ದ ಇಲ್ಲಿ ತನಕ ಇದ್ದಂತಹ ವಿಶ್ವದಾಖಲೆಯಾಗಿತ್ತು. ಆದರೆ ಅಫ್ಘಾನಿಸ್ತಾನ ಆ ದಾಖಾಲೆಯನ್ನು ಮುರಿದಿದ್ದು ಹೊಸ ದಾಖಲೆ ನಿರ್ಮಿಸಿದೆ.
ಆರಂಭಿಕರಾದ ಹಜರತ್ಹುಲ್ಲಾ ಝಾಝೈ ಹಾಗೂ ಉಸ್ಮಾನ್ ಘಾನಿ ಮೊದಲ ವಿಕೆಟ್ಗೆ ದಾಖಲೆಯ 236 ರನ್ಗಳ ಜೊತೆಯಾಟವಾಡಿದರು. ಝಾಝೈ 62 ಎಸೆತಗಳಲ್ಲಿ 16 ಸಿಕ್ಸರ್ ಹಾಗೂ 11 ಬೌಂಡರಿ ನೆರವಿನಿಂದ 162 ರನ್ ಕಲೆಹಾಕಿದರು. ಉಸ್ಮಾನ್ 48 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು.
ಈ ಮೂಲಕ 2016ರಲ್ಲಿ ಐಪಿಎಲ್ ನಲ್ಲಿ ಕೊಹ್ಲಿ-ಎಬಿಡಿ ನಿರ್ಮಿಸಿದ್ದ 229 ರನ್ಗಳ ವಿಶ್ವದಾಖಲೆಯನ್ನು ಈ ಜೋಡಿ ಅಳಿಸಿ ಹಾಕಿದೆ.