ಹೈದರಾಬಾದ್, ಫೆ 17(SM): ಟೀಂ ಇಂಡಿಯಾದ ಚಾಣಾಕ್ಷ ವಿಕೆಟ್ ಕೀಪರ್ ಎಂ.ಎಸ್.ಧೋನಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ನಡೆದ ಆಸಿಸ್ ಹಾಗೂ ಕಿವೀಸ್ ಸರಣಿಗಳೇ ಬೆಸ್ಟ್ ಎಕ್ಸಾಂಪಲ್. ಮುಂದಿನ ದಿನಗಳಲ್ಲಿ ಧೋನಿಯ ನಂತರದಲ್ಲಿ ಚತುರ ವಿಕೆಟ್ ಕೀಪರ್ ಯಾರು ಎನ್ನುವ ಪ್ರಶ್ನೆಗೆ ರಿಷಭ್ ಪಂತ್ ಉತ್ತರವಾಗಿದ್ದಾರೆ.
ಯುವ ಆಟಗಾರ ರಿಷಭ್ ಪಂತ್ ಸದ್ಯ ಟೀಮ್ ಇಂಡಿಯಾ ನಿರೀಕ್ಷಿತ ಆಟಗಾರ. ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಲೆಡ್ಜಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಜೊತೆಗೆ ವಿಕೆಟ್ ಹಿಂದೆ ಹಲವಾರು ದಾಖಲೆ ಬರೆದಿದ್ದರು. ಪಂತ್ ಅವರ ಕೀಪಿಂಗ್ನಲ್ಲಿ ಗಮನಾರ್ಹ ಪ್ರದರ್ಶನಕ್ಕೆ ಕಾರಣ ಧೋನಿಯವರ ಸಕ್ಸಸ್ ಫಾರ್ಮುಲಾ ಎಂಬುದು ಬಹಿರಂಗವಾಗಿದೆ.
ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಪಂತ್ ತಮ್ಮ ಕೀಪಿಂಗ್ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲು ಕಾರಣ ಧೋನಿ ಎಂದು ಹೇಳಿಕೊಂಡಿದ್ದಾರೆ. ಭಾರತದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಪಂತ್ಗೆ ಧೋನಿಯ ಫಾರ್ಮುಲಾವನ್ನು ಹೇಳಿದ್ದರಂತೆ.
ಧೋನಿ ಎರಡೂ ಬದಿಯನ್ನೂ ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಾರೆ, ನೀನು ಸಹ ಅದನ್ನೇ ಟ್ರೈ ಮಾಡು ಎಂದು ಮೋರೆ ಪಂತ್ಗೆ ಸಲಹೆ ನೀಡಿದ್ದರಂತೆ. ಪಂತ್ ಇದನ್ನೇ ಫಾಲೋ ಮಾಡುತ್ತಿದ್ದು, ಅದರಿಂದಾಗಿಯೇ ಪಂತ್ ಸದ್ಯ ಕೀಪಿಂಗ್ ನಲ್ಲಿ ಸಕ್ಸಸ್ ಆಗುತ್ತಿದ್ದಾರೆ.