ಆಕ್ಲೆಂಡ್, ಫೆ 09(SM): ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಟಿ-20 ಪಂದ್ಯದಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ರೋಹಿತ್ ಬ್ಯಾಂಟಿಂಗ್ ಗೆ ಇಳಿದು ಅರ್ಧಶತಕ ಸಿಡಿಸುವ ಮೂಲಕ ಟ್ವೆಂಟಿ-20 ಪದಯದಲ್ಲಿ ಅತ್ಯಧಿಕ ರನ್ ಗಳಿಸಿದವರ ಲೀಸ್ಟ್ ನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. 2ನೇ ಪಂದ್ಯದಲ್ಲಿ ಭಾರತ ೭ ವಿಕೆಟ್ ಗಳ ಜಯಗಳಿಸಿದೆ.
20-20 ಕ್ರಿಕೆಟ್ ನಲ್ಲಿ ಅವರು ಒಟ್ಟು 2288 ರನ್ ಗಳಿಸಿದರು. ಇದರೊಂದಿಗೆ ನ್ಯೂಜಿಲ್ಯಾಂಡ್ ನ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್ ಅವರು ದಾಖಲಿಸಿದ್ದ 2272ರನ್ ಗಳ ದಾಖಲೆಯನ್ನು ಮುರಿದಿದ್ದಾರೆ.
ಟಿ-20 ಕ್ರಿಕೆಟ್ ಗೆ ರೋಹಿತ್ ಅವರು 2007ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಆ ಬಳಿಕ ಸುಮಾರು 92 ಪಂದ್ಯಗಳನ್ನು ರೋಹಿತ್ ಆಡಿದ್ದಾರೆ. ಅವರು ಆಡಿರುವ ಪಂದ್ಯಗಳಲ್ಲಿ ಸುಮಾರು 16 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಇನ್ನು ಪಾಕಿಸ್ತಾನ ಆಟಗಾರ ಶೋಯಬ್ ಮಲಿಕ್ 2263ರನ್ ಗಳ ಮೂಲಕ ಮೂರನೇ ಸ್ಥಾನದಲ್ಲಿದ್ದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2167ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.