ದುಬೈ, ಸೆ 08 (DaijiworldNews/DB): ಏಷ್ಯಾ ಕಪ್ ಕ್ರಿಕೆಟ್ನಲ್ಲಿ ಇಂದು ನಡೆದ ಭಾರತ-ಅಪ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಆ ಮೂಲಕ ಮೂರು ವರ್ಷದ ನಂತರ ಅವರು ಚೊಚ್ಚಲ ಶತಕ ದಾಖಲಿಸಿದಂತಾಗಿದೆ.
ಭಾರತ ತಂಡವು ಇಂದು ಅಪ್ಘಾನಿಸ್ತಾನ ತಂಡವನ್ನು ಎದುರಿಸುತ್ತಿದ್ದು, ಫೈನಲ್ ರೇಸ್ನಿಂದ ಹೊರಗುಳಿದಿರುವ ಎರಡೂ ತಂಡಗಳು ಏಷ್ಯಾ ಕಪ್ ಪ್ರಯಾಣವನ್ನು ಗೆಲುವಿನೊಂದಿಗೆ ಕೊನೆಯಾಗಿಸಲು ಸೆಣಸಾಡುತ್ತಿವೆ. ವಿಶೇಷವೆಂದರೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಸಿಡಿಸಿರುವುದು. 53 ಎಸೆತಗಳಲ್ಲಿ ಕೊಹ್ಲಿ ಶತಕ ಸಿಡಿಸಿ ಸಾಧನೆ ಮಾಡಿದ್ದು, 2019 ರ ನವೆಂಬರ್ ಬಳಿಕ ಮೊದಲ ಶತಕಕ್ಕೆ ಸಾಕ್ಷಿಯಾದರು. 61 ಎಸೆತಕ್ಕೆ 122 ರನ್ ಗಳಿಸಿದರು.
20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಟೀಂ ಇಂಡಿಯಾ ಗಳಿಸಿದೆ. ನಾಯಕ ಕೆ.ಎಲ್. ರಾಹುಲ್ 62, ಸೂರ್ಯ ಕುಮಾರ್ 06 ಮತ್ತು ರಿಷಬ್ ಪಂಥ್ 20 ರನ್ ಸಿಡಿಸಿದರು.
ಅಫ್ಘಾನಿಸ್ತಾನಕ್ಕೆ ಗೆಲುವು ಸಾಧಿಸಲು 213 ರನ್ಗಳ ಅವಶ್ಯಕತೆ ಇದ್ದು, ಗೆಲುವು ಯಾರ ಪಾಲಾಗಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.