ನವದೆಹಲಿ, ಸೆ 03 (DaijiworldNews/DB): ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ದೆಹಲಿ ಫುಟ್ ಬಾಲ್ ಅಧ್ಯಕ್ಷ ಮತ್ತುಆಡಳಿತಾಧಿಕಾರಿ ಶಾಜಿ ಪ್ರಭಾಕರನ್ ಅವರು ಶನಿವಾರ ನೇಮಕಗೊಂಡಿದ್ದಾರೆ.
ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ನೇತೃತ್ವದಲ್ಲಿ ಪುಟ್ ಬಾಲ್ ಹೌಸ್ನಲ್ಲಿ ನಡೆದ ಅಖಿಲ ಭಾರತ ಪುಟ್ಬಾಲ್ ಫೆಡರೇಶನ್ನ ನೂತನ ಕಾರ್ಯಕಾರಿ ಸಮಿತಿಯಲ್ಲಿ ಈ ನೇಮಕ ಮಾಡಲಾಯಿತು.
ಚೌಬೆ ಅವರು ಈ ಸ್ಥಾನಕ್ಕೆ ಪ್ರಭಾಕರನ್ ಹೆಸರು ಸೂಚಿಸಿದರು. ಬಳಿಕ ಉಳಿದ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು. ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಆರು ಮಂದಿ ಮಾಜಿ ಫುಟ್ಬಾಲ್ ಆಟಗಾರರು ಇದೇ ಮೊದಲ ಬಾರಿಗೆ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಸಂಘಟಿತ ಕೆಲಸದಿಂದ ಫುಟ್ಬಾಲ್ ಆಟವನ್ನು, ಆಟಗಾರರನ್ನು ಬೆಳೆಸಬೇಕು. ವೈಯಕ್ತಿಕ ಪ್ರತಿಷ್ಠೆಗಳನ್ನು ಕೆಲಸದಲ್ಲಿ ತಾರದೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಬೇಕು, ಶಿಸ್ತು ಇಲ್ಲಿ ಅತಿ ಮುಖ್ಯವಾಗಿರಬೇಕು ಎಂದು ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿದರು.