ನವದೆಹಲಿ, ಸೆ 03 (DaijiworldNews/DB): ಜಾವೆಲಿನ್ ಪಟು ನೀರಜ್ ಚೋಪ್ರಾ ಅವರ ಜಾವೆಲಿನ್ನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 1.5 ಕೋಟಿ ರೂ.ಗಳಿಗೆ ಇ-ಹರಾಜಿನಲ್ಲಿ ಖರೀದಿಸಿತ್ತು ಎಂಬ ಅಂಶ ಬಹಿರಂಗಗೊಂಡಿದೆ.
ಹೆಸರು ಬಹಿರಂಗಪಡಿಸಲಿಚ್ಚಿಸದ ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಗಂಗಾನದಿ ಸ್ವಚ್ಛಗೊಳಿಸುವ ನಮಾಮಿ ಗಂಗೆ ಯೋಜನೆಗೆ ದೇಣಿಗೆ ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಬಂದ ಸ್ಮರಣಿಕೆಗಳನ್ನು ಇ-ಹರಾಜುಗಿಟ್ಟಿದ್ದರು. 2021ರ ಸೆಪ್ಟೆಂಬರ್ನಿಂದ ಅಕ್ಟೋಬರ್ವರೆಗೆ ಇ-ಹರಾಜು ಪ್ರಕ್ರಿಯೆ ನಡೆದಿತ್ತು. ಈ ಪ್ರಕ್ರಿಯೆಯಲ್ಲಿ ನೀರಜ್ ಚೋಪ್ರಾ ಅವರ ಜಾವೆಲಿನ್ ಕೂಡಾ ಇತ್ತು. ಇದನ್ನು 1.5 ಕೋಟಿ ರೂ. ನೀಡಿ ಮಂಡಳಿ ಖರೀದಿ ಮಾಡಿತ್ತು ಎಂದು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಚೋಪ್ರಾ ಅವರ ಜಾವೆಲಿನ್ ಸಹಿತ ಇನ್ನೂ ಕೆಲಸವು ಸ್ಮರಣಿಕೆಗಳನ್ನು ಬಿಸಿಸಿಐ ಇ-ಹರಾಜಿನಲ್ಲಿ ಖರೀದಿಸಿದೆ. ಆ ಮೂಲಕ ನಮಾಮಿ ಗಂಗೆ ಯೋಜನೆಗೆ ಸಹಕರಿಸುವುದು ನಮ್ಮ ಉದ್ದೇಶವಾಗಿತ್ತು ಎಂದವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.