ಕಾರ್ಕಳ, ಆ 25 (DaijiworldNews/DB): ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆ ಹಾಗೂ ಪ್ರಾಥಮಿಕ ವಿಭಾಗಗಳ ಬಾಲಕ ಬಾಲಕಿಯರ ನಾಲ್ಕೂ ತಂಡಗಳು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿವೆ.
ಪ್ರಾಥಮಿಕ ವಿಭಾಗದ ಬಾಲಕಿಯರ ತಂಡವನ್ನು 6ನೇ ತರಗತಿಯ ಶಗುನ್ ವರ್ಮ, 7ನೇ ತರಗತಿಯ ಸಾಂಚಿ ರಾವ್, ರಾಫಿಯಾ ಬಾನು, 8ನೇ ತರಗತಿಯ ಗಣ್ಯ ಪೂಜಾರಿ ಹಾಗೂ ಬಾಲಕರ ತಂಡವನ್ನು 6ನೇ ತರಗತಿಯ ರಾಯನ್ ಮಿರಾಂಡ, ನಿತಿನ್, 7ನೇ ತರಗತಿಯ ಅನುಷ್ ಶೆಟ್ಟಿ, ವಿಶೋನ್ ಸಲ್ದಾನ ಪ್ರತಿನಿಧಿಸಿದ್ದರು.
ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡವನ್ನು 10ನೇ ತರಗತಿಯ ಕಿಯೋರಾ ಪಾಯಸ್, ಅಲ್ವಿನಿಯಾ ಡೆಸಾ, ಪೂರ್ವಿಕಾ ಹಾಗೂ ಬಾಲಕರ ತಂಡವನ್ನು 10ನೇ ತರಗತಿಯ ಅರುಷ್ ವರ್ಮ, ಅ್ಯನ್ಶ್ ಪ್ರತಿನಿಧಿಸಿದ್ದರು. ಈ ನಾಲ್ಕೂ ತಂಡಗಳು ಪ್ರಥಮ ಸ್ಥಾನ ಪಡೆದು ಚಾಮರಾಜ ನಗರದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಮೇರಿಯನ್ ಡಿ’ಸೋಜ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್, ಪ್ರಕಾಶ್ ನಾಯ್ಕ್, ಲಾವಣ್ಯ ಶೆಟ್ಟಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.