ಲಂಡನ್, ಆ 25 (DaijiworldNews/DB): ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಅವರು ತಮ್ಮ ತರಬೇತುದಾರ ಜಿರಿ ವಾನೆಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
32ರ ಹರೆಯದ ಕ್ವಿಟೋವಾ ಅವರು ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ನಲ್ಲಿ ಬುಧವಾರ ಘೋಷಿಸಿದರು. 2016ರ ನವೆಂಬರ್ನಿಂದ ಕ್ವಿಟೋವಾ ಅವರಿಗೆ ಜಿರಿ ವಾನೆಕ್ ಅವರು ತರಬೇತುದಾರರಾಗಿದ್ದಾರೆ. ಈ ವೇಳೆ ಇಬ್ಬರಲ್ಲಿಯೂ ಪ್ರೀತಿ ಚಿಗುರಿದ್ದು, ಇದೀಗ ವಿವಾಹದವರೆಗೂ ಬಂದು ನಿಂತಿದೆ. ಏಳು ವರ್ಷದ ಸುದೀರ್ಘ ಸ್ನೇಹದ ಬಳಿಕ ಸಿಹಿ ಸುದ್ದಿ ಹೊರಬಿದ್ದಿರುವುದು ಕ್ವಿಟೋವಾ ಅಭಿಮಾನಿಗಳಿಗೂ ಸಂಭ್ರಮ ಹೆಚ್ಚಿಸಿದೆ.
ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಆಗಿರುವ ಪೆಟ್ರಾ ಕ್ವಿಟೋವಾ ಅವರು 2011 ಮತ್ತು 2014ರಲ್ಲಿ ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿಗಳನ್ನು ಗೆದ್ದಿದ್ದರು. ಸಿನ್ಸಿನಾಟಿಯಲ್ಲಿ ನಡೆದ ಡಬ್ಲ್ಯುಟಿಎ ಟೂರ್ 1000 ಕೂಟದಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ್ದರು.