ಹರಾರೆ: ಜಿಂಬಾಬ್ವೆ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ನಾಯಕತ್ವದ ಟೀಂ ಇಂಡಿಯಾದ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಈ ಮೂಲಕ 1-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಪಡೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 40.3 ಓವರ್ ಗಳಲ್ಲಿ ತನೆಲ್ಲಾ ವಿಕೆಟ್ ಕಳೆದುಕೊಂಡು 189 ರನ್ ಗಳಿಸಲಷ್ಟೇ ಶಕ್ತವಾಯಿತು.
ಜಿಂಬಾಬ್ವೆ ಪರ ತಂಡದ ಪರ ರೆಗಿಸ್ ಚಕಬ್ವಾ 35, ಬ್ರಾಡ್ ಇವಾನ್ಸ್ 33, ರಿಚರ್ಡ್ ನಾಗರ್ವ 34, ರಿಯಾನ್ ಬರ್ಲ್ 11, ಸಿಖಂದರ್ ರಾಜ 12 ರನ್ ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಒಂದಂಕಿ ದಾಟಲಿಲ್ಲ. ಇದರಿಂದಾಗಿ 40. 3 ಓವರ್ ಗಳಲ್ಲಿ ತನೆಲ್ಲಾ ವಿಕೆಟ್ ಕಳೆದುಕೊಂಡು 189 ರನ್ ಗಳಿಸಲಷ್ಟೇ ಶಕ್ತವಾಯಿತು.ಟೀಂ ಇಂಡಿಯಾ ಪರ ದೀಪಕ್ ಚಹರ್ 3, ಪ್ರಸಿದ್ಧ್ ಕೃಷ್ಣ 3, ಅಕ್ಸರ್ ಪಟೇಲ್ 3 ವಿಕೆಟ್ ಪಡೆದರೆ ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.
ಜಿಂಬಾಬ್ವೆ ನೀಡಿದ 189 ರನ್ ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಇನ್ನೂ 115 ಎಸೆತಗಳು ಬಾಕಿ ಇರುವಂತೆಯೇ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಟೀಂ ಇಂಡಿಯಾ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಶಿಖರ್ ಧವನ್ 81 ಹಾಗೂ ಶುಭ್ ಮನ್ ಗಿಲ್ 82 ರನ್ ಗಳಿಸಿದರು. ಇದರಿಂದಾಗಿ 30.5 ಓವರ್ ಗಳಲ್ಲಿ 192 ರನ್ ಗಳಿಸುವುದರೊಂದಿಗೆ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿತು.