ಕರಾಚಿ, ಆ 11 (DaijiworldNews/DB): ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಲು ಬರ್ಮಿಂಗ್ ಹ್ಯಾಮ್ ಗೆ ತೆರಳಿದ್ದ ಪಾಕಿಸ್ತಾನ್ ಇಬ್ಬರು ಬಾಕ್ಸರ್ ಗಳು ನಾಪತ್ತೆಯಾದ ಪ್ರಸಂಗ ನಡೆದಿದೆ.
ಸುಲೇಮಾನ್ ಬಲೋಚ್ ಮತ್ತು ನಜೀರುಲ್ಲ ನಾಪತ್ತೆಯಾದ ಬಾಕ್ಸರ್ ಗಳು.ಬಾಕ್ಸರ್ ಗಳ ನಾಪತ್ತೆ ವಿಚಾರವನ್ನು ಪಾಕಿಸ್ತಾನ ಬಾಕ್ಸಿಂಗ್ ಫೆಡರೇಶನ್ ಕಾರ್ಯದರ್ಶಿ ನಾಸಿರ್ ತಾಂಗ್ ಖಚಿತಪಡಿಸಿದ್ದಾರೆ.
ಬಾಕ್ಸರ್ ಗಳ ಪಾಸ್ ಪೋರ್ಟ್ ಮತ್ತಿತರ ದಾಖಲೆಗಳು ಫೆಡರೇಶನ್ ಅಧಿಕಾರಿಗಳ ಬಳಿ ಭದ್ರವಾಗಿವೆ. ಆದರೆ ಬಾಕ್ಸರ್ ಗಳು ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಬಾಕ್ಸರ್ ಗಳ ಪತ್ತೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದವರು ತಿಳಿಸಿರುವುದಾಗಿ ವರದಿಯಾಗಿದೆ.
ಸೋಮವಾರ ಕಾಮನ್ ವೆಲ್ತ್ ಕ್ರೀಡಾಕೂಟ ಕೊನೆಗೊಂಡಿತ್ತು.