ಬರ್ಮಿಂಗ್ ಹ್ಯಾಮ್, ಆ 09 (DaijiworldNews/MS):ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ 12 ದಿನಗಳ ಕಾಲ ನಡೆದ 22ನೇ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಅದ್ಭುತ ಸಮಾರಂಭದೊಂದಿಗೆ ವರ್ಣ ರಂಜಿತ ತೆರೆ ಬಿದ್ದಿತು.
ಭಾರತದ ಸ್ಪರ್ಧಿಗಳು ಅತ್ಯದ್ಭುತ ಪ್ರದರ್ಶನ ತೋರಿ ಕ್ರೀಡಾಕೂಟದಲ್ಲಿ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸೇರಿದಂತೆ ಒಟ್ಟಾರೆ 61 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಭಾರತದಿಂದ 215 ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 4,500ಕ್ಕೂ ಹೆಚ್ಚು ಅಥ್ಲೆಟ್ ಗಳು 72 ದೇಶಗಳಿಂದ ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಟಿಟಿಪಟು ಅಚಂತ ಶರತ್ ಕಮಲ್ ಮತ್ತು ಬಾಕ್ಸರ್ ನಿಖತ್ ಜರೀನ್ ಭಾರತದ ತ್ರಿವರ್ಣ ದ್ವಜ ಹಿಡಿದು ಸಾಗಿದರು.ಶರತ್ ನಾಲ್ಕು ಪದಕ ಗೆದ್ದು ಸಾಧನೆ ಮಾಡಿದರೆ, ನಿಝತ್ ೫೦ ಜೆಕಿ ಫ್ಲೈವೇಟ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. 2026ರ ಕಾಮನ್ವೆಲ್ತ್ ಗೇಮ್ಸ್ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಲಿದೆ.