ಬರ್ಮಿಂಗ್ ಹ್ಯಾಮ್, ಆ 08 (DaijiworldNews/MS): ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ , ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ತ್ಝೆ ಯೋಂಗ್ ಎನ್ ಜಿ ವಿರುದ್ದ ಗೆಲುವು ಸಾಧಿಸುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದರು.
ಲಕ್ಷ್ಯ ಸೇನ್ ಫೈನಲ್ನಲ್ಲಿ 19-21, 21-9, 21-16 ರಲ್ಲಿ ಯೋಂಗ್ ಎನ್ಜಿ ಅವರನ್ನು ಸೋಲಿಸಿದ್ದು, ಭಾರತಕ್ಕೆ ಇದು 20ನೇ ಚಿನ್ನದ ಪದಕವಾಗಿದೆ.