ಬರ್ಮಿಂಗ್ ಹ್ಯಾಮ್, ಆ 08 (DaijiworldNews/MS): ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ಅಂತರದ ನೇರ ಸೆಟ್ಗಳಿಂದ ಸಿಂಧು ಗೆಲುವು ಸಾಧಿಸಿದ್ದಾರೆ.
ಇದರೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಿಂಧು, 5 ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. 2018 (ಮಿಶ್ರಾ ಡಬಲ್ಸ್), 2018(ಸಿಂಗಲ್ಸ್), 2022(ಮಿಶ್ರಾ ಡಬಲ್ಸ್), 2014 (ಸಿಂಗಲ್ಸ್)ರಲ್ಲಿ ಪದಕ ಗೆದ್ದಿದ್ದರು. ಇದೀಗ ಸಿಂಧು ಅವರ ಪರಿಶ್ರಮಕ್ಕೆ ಉತ್ತಮ ಫಲಿತಾಂಶವೇ ದೊರೆತಿದ್ದು ಸ್ವರ್ಣದ ಪದಕ ತಮ್ಮದಾಗಿಸಿದ್ದಾರೆ.