ಬರ್ಮಿಂಗ್ ಹ್ಯಾಮ್, ಆ 06 (DaijiworldNews/MS): ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಬಲಾಢ್ಯ ಇಂಗ್ಲೆಂಡ್ ತಂಡವನ್ನು ಮಣಿಸಿ ಇಂಗ್ಲೆಂಡ್ ವಿರುದ್ಧ ಭಾರತ 4 ರನ್ ಗೆಲುವು ಸಾಧಿಸಿದೆ.
165 ರನ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ 12 ಎಸೆತಗಳಲ್ಲಿ ಇಂಗ್ಲೆಂಡ್ ಗೆಲುವಿಗೆ 27 ರನ್ ಬೇಕಿತ್ತು. 19ನೇ ಓವರ್ನಲ್ಲಿ ಪೂಜಾ, 13 ರನ್ ಬಿಟ್ಟುಕೊಟ್ಟರು. ಕೊನೆಯ ಓವರ್ನಲ್ಲಿ ಸ್ನೇಹ 9 ರನ್ ನೀಡಿ, ಗೆಲುವು ತಂದುಕೊಟ್ಟರು.
ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿರುವ ಭಾರತ ವನಿತೆಯರ ತಂಡ ಆ. ೭ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡನೇ ಸೆಮಿಫೈನಲ್ ಗೆದ್ದು ಬರುವ ತಂಡದ ಜತೆ ಆಡಲಿದೆ. ಹೀಗೆ ಫೈನಲ್ ಪ್ರವೇಶ ಮಾಡಿ ಐತಿಹಾಸಿಕ ಸಾಧನೆ ಮಾಡಿರುವ ಭಾರತ ವನಿತೆಯರು ಫೈನಲ್ ಪಂದ್ಯದಲ್ಲಿ ಗೆದ್ದರೆ ಚಿನ್ನ ಅಥವಾ ಸೋತರೆ ಬೆಳ್ಳಿ ಪದಕವನ್ನು ಗೆಲ್ಲಲಿದ್ದಾರೆ.