ಪುಣೆ, ಏ. 06 (DaijiworldNews/SM): ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಶಿಯೇಷನ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐದು ವಿಕೆಟ್ ಗಳ ಗೆಲುವು ದಾಖಲಿಸಿದೆ. ಆ ಮೂಲಕ ಮುಂಬೈ 15ನೇ ಸೀಸನ್ ನಲ್ಲಿ ಸತತ ಸೋಲುಗಳ ಸುಳಿಯಲ್ಲಿ ಸಿಲುಕಿದಂತಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ತಂಡ ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಆಟಗಾರ ಹಾಗೂ ನಾಯಕ ರೋಹಿತ್ ಶರ್ಮಾ ಬೇಗನೆ ವಿಕೆಟ್ ಒಪ್ಪಿಸಿದರು. ಬಳಿಕ ತಂಡಕ್ಕೆ ನೆರವಾದ ಇಶಾನ್ ಕಿಶನ್ 14 ರನ್ ಗಳಿಸಿದರು. ಬ್ರೇವಿಸ್ 29, ಸೂರ್ಯ ಕುಮಾರ್ ಯಾದವ್ 52, ತಿಲಕ್ ವರ್ಮಾ 38, ಪೊಲಾರ್ಡ್ 22 ರನ್ ಸಿಡಿಸಿದರು.
ಕೊಲ್ಕತ್ತಾ ಪರ ವೆಂಕಟೇಶ್ ಐಯ್ಯರ್ 50 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಐದನೇ ವಿಕೆಟ್ ಗೆ ಐಯ್ಯರ್ ಗೆ ಜೊತೆಯಾದ ಕುಮಿನ್ಸ್ ಅಬ್ಬರಿಸಿದರು. ಕೇವಲ 15 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 56 ರನ್ ಸಿಡಿಸಿ ತಂಡದ ಗೆಲುವಿನ ರುವಾರಿ ಎಣಿಸಿಕೊಂಡರು.