ವೆಲ್ಲಿಂಗ್ಟನ್, ಫೆ 25 (DaijiworldNews/HR): ಕ್ರಿಕೆಟ್ನ ಅನೇಕ ನಿಯಮಗಳು ಕೊರೊನಾದಿಂದಾಗಿ ಬದಲಾಗಿದ್ದು, ಇದೀಗ ಮಹಿಳಾ ಏಕದಿನ ವಿಶ್ವಕಪ್ ಮೂಲಕ ಮತ್ತೂಂದು ನಿಯಮವನ್ನು ಜಾರಿಗೊಳಿಸಲು ಐಸಿಸಿ ನಿರ್ಧರಿಸಿದೆ.
ಐಸಿಸಿಯ ಹೊಸ ನಿಯಮದ ಪ್ರಕಾರ, ತಂಡವೊಂದದಲ್ಲಿ ಕೊರೊನಾ ಪತ್ತೆಯಾದರೆ ಆ ತಂಡ ಕನಿಷ್ಠ 9 ಆಟಗಾರರೊಂದಿಗೆ ಆಡಬಹುದಾಗಿದೆ ಎಂದು ಹೇಳಿದೆ.
ಇನ್ನು ಈ ನಿಯಮವನ್ನು ಮೊದಲಿಗೆ ರಣಜಿ ಕ್ರಿಕೆಟ್ ಟ್ರೋಫಿಯಲ್ಲಿ ಬಿಸಿಸಿಐ ಜಾರಿಗೆ ತಂದಿದ್ದು, ಇದೀಗ ಬಿಸಿಸಿಐನಿಂದ ಪ್ರೇರಿತವಾದ ಐಸಿಸಿ ಈ ನಿಯಮ ವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸುತ್ತಿದೆ.
ಕ್ರಿಕೆಟ್ ತಂಡದ ಅನೇಕ ಆಟಗಾರಿಗೆ ಕೊರೊನಾ ದೃಢಪಟ್ಟಾಗ ಹನ್ನೊಂದರ ಬಳಗವನ್ನು ಹೊಂದಿಸುವುದೇ ಕಷ್ಟವಾಗಿತ್ತು. ಹಾಗಾಗಿ ಈಗ 11 ಆಟಗಾರರ ಬದಲಿಗೆ 9 ಆಟಗಾರರೊಂದಿಗೆ ಆಟವನ್ನು ಮುಂದುವರಿಸುವ ಈ ನಿಯಮವನ್ನು ಐಸಿಸಿ ಜಾರಿಗೆ ತಂದಿದೆ.