ಬೆಂಗಳೂರು, ಫೆ. 22 (DaijiworldNews/SM): ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿರುವ ಆಟಗಾರ ರಾಬಿನ್ ಉತ್ತಪ್ಪ ಐಪಿಎಲ್ ಹರಾಜಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಸ್ ಕೆ ತಂಡಕ್ಕೆ ಆಯ್ಕೆಯಾಗಿರುವುದು ನನಗೆ ಸಂತಸ ತಂದಿದೆ. ಮಹಿ ಜೊತೆ ಆಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಜೊತೆ ಪಂದ್ಯವಾಡದೆ ಸರಿಸುಮಾರು 12 ವರ್ಷಗಳಾಗಿವೆ. ಚೆನ್ನೈನಲ್ಲಿದ್ದ ಹಿರಿಯ ಆಟಗಾರರ ಜೊತೆ ಆಡದೆ ಅನೇಕ ಸಮಯವಾಗಿದೆ. ಈ ಬಾರಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುವೆ. ಅಲ್ಲದೆ, ನನ್ನ ಮೇಲೆ ಇರಿಸಿದ ಭರವಸೆಯನ್ನು ಉಳಿಸುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಈ ಅವಕಾಶಕ್ಕಾಗಿ ಹಲವು ಸಮಯದಿಂದ ಎದುರು ನೋಡುತ್ತಿದ್ದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.