ಕೊಲ್ಕತ್ತಾ, ಫೆ. 16 (DaijiworldNews/SM): ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆದ ಭಾರತ ವಿಂಡೀಸ್ ನಡುವಿನ ಟಿ-೨೦ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 157 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ಪೂರನ್ 61 ರನ್ ಸಿಡಿಸಿದರು.
ಇನ್ನು ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ನಾಯಕ ರೋಹಿತ್ ನೆರವಾದರು. ಹಾಗೂ ಉತ್ತಮ ಆರಂಭ ನೀಡಿದರು. ಹತ್ತೊಂಬತ್ತು ಎಸೆತಗಳಲ್ಲಿ 40 ರನ್ ಸಿಡಿಸಿದರು. ಬಳಿಕ ಇಶಾನ್ ಕಿಶಾನ್ 35 ರನ್ ಸಿಡಿಸಿ ನೆರವಾದರು.