ಬೆಂಗಳೂರು, ಫೆ. 01 (DaijiworldNews/SM): ಇತ್ತೀಚಿಗಷ್ಟೇ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಆರ್ ಸಿಬಿ ಜೊತೆಗಿನ ಒಡನಾಟವನ್ನು ನೆನೆದುಕೊಂಡಿದ್ದಾರೆ. ಅಲ್ಲದೆ, ಕೆಲವು ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ.
ತಂಡದ ಕೆಲವು ಹಳೆಯ ಸದಸ್ಯರೊಂದಿಗೆ ಪಾಡ್ಕ್ಯಾಸ್ಟ್ ಕಾರ್ಯಕ್ರಮವನ್ನು ಆಯೋಜಿಸಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಂಡದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.
2008ರಲ್ಲಿ ತಂಡಕ್ಕೆ ಆಯ್ಕೆಯಾದ ಭಾವನಾತ್ಮಕತೆಯನ್ನು ನೆನೆದುಕೊಂಡರು. ಐಪಿಎಲ್ ಮೊದಲ ಹರಾಜಿನ ವೇಳೆ ಅಂಡರ್ 19 ವಿಶ್ವಕಪ್ ಗಾಗಿ ಮಲೇಷ್ಯಾದಲ್ಲಿದ್ದೆ. ಬೆಂಗಳೂರು ಜೊತೆಗೆ ಡೆಲ್ಲಿ ಫ್ರಾಂಚೈಸಿ ನನ್ನನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಸ್ಪರ್ಧಿಸಿದ್ದನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ ಎಂದು ಭಾವುಕರಾದರು.
ಅಂದು ಹರಾಜಿನಲ್ಲಿ ಬೆಂಗಳೂರು ತಂಡ ಸುಮಾರು ರೂ. 25ಲಕ್ಷ ಕೊಟ್ಟು ನನ್ನನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆರ್ ಸಿಬಿ ತಂಡ ಇಷ್ಟೊಂದು ದೊಡ್ಡ ಮೊತ್ತದೊಂದಿಗೆ ಖರೀಧಿಸುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.