ನವದೆಹಲಿ, ಜ. 25 (DaijiworldNews/SM): ಒಲಂಪಿಕ್ ನಲ್ಲಿ ಚಿನ್ನ ಬಾಚಿಕೊಂಡಿದ್ದ ಬಂಗಾರದ ಹುಡುಗ ನೀರಜ್ ಛೋಪ್ರಾ ಅವರು ಪರಂ ವಿಶಿಷ್ಟ ಸೇವಾ ಪ್ರಶಸ್ತಿಗೆ ಅಯ್ಕೆಗೊಂಡಿದ್ದಾರೆ.
ಗಣರಾಜ್ಯೋತ್ಸವದ ಮುನ್ನಾದಿನದಂದು ಒಲಿಂಪಿಯನ್ ನೀರಜ್ ಚೋಪ್ರಾ ಅವರಿಗೆ ಪರಂ ವಿಶಿಷ್ಟ ಸೇವಾ ಪದಕಕ್ಕೆ ಅಯ್ಕೆ ಮಾಡಲಾಗಿದೆ. ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್ನಲ್ಲಿ ಜಾವ್ಲಿನ್ ಥ್ರೋ ಮೂಲಕ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.