ಪಾರ್ಲ್, ಜ. 21 (DaijiworldNews/SM): ಇಲ್ಲಿ ನಡೆದ ದ. ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ಮತ್ತೆ ಮುಗ್ಗರಿಸಿದ್ದು, ಸರಣಿ ಕೈ ಚೆಲ್ಲಿದೆ. ರಾಹುಲ್ ನಾಯಕತ್ವದ ಮೊದಲ ಸರಣಿ ಇದಾಗಿದ್ದು, ಕಹಿ ಆರಂಭವಾದಂತಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 287 ರನ್ ಗಳಿಸಿದೆ. ನಾಯಕ ಕೆ.ಎಲ್. ರಾಹುಲ್ 55, ವಿಕೆಟ್ ಕೀಪರ್ ಪಂತ್ 85, ಟಾಕೂರ್ 40, ಅಶ್ವಿನ್ 25, ಧವನ್ 29 ರನ್ ಸಿಡಿಸಿದರು.
ಇದಕ್ಕೆ ಉತ್ತರವಾಗಿ ದ. ಆಫ್ರಿಕಾ ತಂಡ 48.1 ಓವರ್ ಗಳಲ್ಲಿ ಮೂರು ವಿಕೆಟ್ ಗಳ ನಷ್ಟಕ್ಕೆ 288 ರನ್ ಗಳಿಸಿ ಏಳು ವಿಕೆಟ್ ಗಳ ಅಂತರದ ಗೆಲುವು ದಾಖಲಿಸಿಕೊಂಡಿತು. ದ. ಆಫ್ರಿಕಾ ಪರ ಮಲನ್ 91, ಕ್ವಿಂಟನ್ ಡಿ ಕಾಕ್ 78 ರನ್ ಗಳನ್ನು ಸಿಡಿಸಿ ತಂಡದ ಗೆಲುವಿಗೆ ನೆರವಾದರು. ಈ ಗೆಲುವಿನ ಮೂಲಕ ಸತತ ಎರಡು ಪಂದ್ಯದಲ್ಲಿ ದ. ಆಫ್ರಿಕಾ ಗೆದ್ದಂತಾಗಿದೆ.